ಬೀದರ್:ಮಾಹಾಮಾರಿ ಕೊರೊನಾ ಸೋಂಕಿಗೆ ಗಡಿ ಜಿಲ್ಲೆಯಲ್ಲಿ ಇಬ್ಬರು ಸಾವನಪ್ಪಿದ್ದು, ಒಟ್ಟು 55 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನೂ 795 ಜನರ ಪರೀಕ್ಷಾ ವರದಿ ಬಾಕಿಯಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದೆ.
ಬೀದರ್ನಲ್ಲಿ 55 ಮಂದಿಗೆ ಕೊರೊನಾ ಪಾಸಿಟಿವ್, 795 ವರದಿ ಬಾಕಿ - ಬೀದರ್ ಕೊರೊನಾ ಕೇಸ್
ಗಡಿ ಜಿಲ್ಲೆ ಬೀದರ್ನಲ್ಲಿ ಕೊರೊನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಒಟ್ಟು 55 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನೂ 795 ಜನರ ಪರೀಕ್ಷಾ ವರದಿ ಬಾಕಿಯಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಸಂಗ್ರಹ ಚಿತ್ರ
ಜಿಲ್ಲೆಯಾದ್ಯಂತ 8,078 ಜನರ ಗಂಟಲು ದ್ರವದ ಮಾದರಿಯನ್ನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು, ಈ ಪೈಕಿ 7,228 ಜನರ ವರದಿ ನೆಗೆಟಿವ್ ಬಂದಿದೆ. ನಗರದ ಓಲ್ಡ್ ಸಿಟಿಯ ಕಂಟೈನ್ಮೆಂಟ್ ಝೋನ್ನಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 55 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ 14 ಜನರಿಗೆ ಬ್ರೀಮ್ಸ್ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ.
ಇನ್ನು, ಸೋಂಕಿನಿಂದ ಇಬ್ಬರು ಸಾವನಪ್ಪಿದ್ದು, ಸದ್ಯ 39 ಸೋಂಕಿತರಿಗೆ ಜಿಲ್ಲಾ ಕೊರೊನಾ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated : May 17, 2020, 11:54 AM IST