ಕರ್ನಾಟಕ

karnataka

ETV Bharat / state

ಬೀದರ್​ನಲ್ಲಿಂದು ಕೊರೊನಾಗೆ ಇಬ್ಬರು ಬಲಿ: 53 ಜನರಲ್ಲಿ ಸೋಂಕು ಪತ್ತೆ - Corona Positive Casesin Bidar

ಜಿಲ್ಲೆಯಲ್ಲಿಂದು 60 ಹಾಗೂ 65 ವಯಸ್ಸಿನ ಇಬ್ಬರು ವೃದ್ಧರು ಕೊರೊನಾಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

Bidar
ಬೀದರ್​ನಲ್ಲಿಂದು ಕೊರೊನಾಗೆ ಇಬ್ಬರು ಬಲಿ

By

Published : Jul 16, 2020, 10:45 PM IST

ಬೀದರ್:ಕೊರೊನಾ ರೌದ್ರಾವತಾರ ಮುಂದುವರೆದಿದ್ದು, ಇಂದು ಒಂದೇ ದಿನ 53 ಜನರಲ್ಲಿ ಸೋಂಕು ದೃಢವಾಗಿದೆ. ಸೋಂಕಿನಿಂದ ಬಳಲಿ ಮತ್ತೆ ಇಬ್ಬರು ವೃದ್ಧರು ಸಾವನ್ನಪ್ಪಿರುವ ವರದಿಯಾಗಿದೆ.

ಬೀದರ್​ನಲ್ಲಿಂದು 53 ಜನರಲ್ಲಿ ಸೋಂಕು ಪತ್ತೆ

ಜಿಲ್ಲೆಯಲ್ಲಿ 60 ಹಾಗೂ 65 ವಯಸ್ಸಿನ ಇಬ್ಬರು ವೃದ್ಧರು ಸಾವನ್ನಪ್ಪಿದ್ದಾರೆ. ಹುಮನಾಬಾದ್, ಬಸವಕಲ್ಯಾಣ, ಔರಾದ್, ಬೀದರ್ ಹಾಗೂ ಭಾಲ್ಕಿ ತಾಲೂಕಿನ 53 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತ ಸಂಖ್ಯೆ ,193 ಕ್ಕೆ ಏರಿಕೆಯಾಗಿದೆ. 55 ಜನರು ಬಲಿಯಾಗಿದ್ದು ಈ ಪೈಕಿ ಇಬ್ಬರು ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ABOUT THE AUTHOR

...view details