ಬೀದರ್:ಜಿಲ್ಲೆಯಲ್ಲಿ ಇಂದು ಮೂವರು ಸಾವನ್ನಪ್ಪಿದ್ದು 51 ಜನರಲ್ಲಿ ಸೋಂಕು ದೃಢವಾಗಿದೆ.
ಕೊರೊನಾಗೆ ಇಂದು ಮೂವರು ಬಲಿ, 51 ಜನರಲ್ಲಿ ಸೋಂಕು ದೃಢ - ಬೀದರ್ ಕೊರೊನಾ ಸುದ್ದಿ
ಬೀದರ್ ಜಿಲ್ಲೆಯ ಇಂದಿನ ಕೊರೊನಾ ಮಾಹಿತಿ ಇಲ್ಲಿದೆ..
Bidar
ಜಿಲ್ಲೆಯ ಔರಾದ್-05, ಬಸವಕಲ್ಯಾಣ-04, ಭಾಲ್ಕಿ-09, ಬೀದರ್- 29, ಹುಮನಾಬಾದ್-07 ಹಾಗೂ ಅನ್ಯ ರಾಜ್ಯದ 01 ಜನರಲ್ಲಿ ಸೋಂಕು ದೃಢವಾಗಿದೆ. ಇಂದು 105 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,307ಕ್ಕೆ ಏರಿಕೆಯಾಗಿದೆ. 3,592 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 133 ಜನರು ಬಲಿಯಾಗಿದ್ದು 578 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.