ಬೀದರ್: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಈ ಮೊದಲು ಸೋಂಕಿತರ ಸಂಪರ್ಕಕ್ಕೆ ಬಂದಿರಬಹುದು ಎಂಬ ಶಂಕೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಶಾಹಿನ್ ಸಂಸ್ಥೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದ್ದ 193 ಜನರ ಪೈಕಿ 50 ಜನರ ವರದಿ ನೆಗೆಟಿವ್ ಬಂದಿದ್ದು, ಅವರನ್ನು ಇಂದು ಬಿಡುಗಡೆ ಮಾಡಲಾಗಿದೆ.
ಕೊರೊನಾ ವರದಿ ನೆಗೆಟಿವ್: ಬೀದರ್ನ ಶಾಹಿನ್ ಕ್ವಾರಂಟೈನ್ನಿಂದ 50 ಜನರಿಗೆ ಬಿಡುಗಡೆ ಭಾಗ್ಯ - ಕೊರೊನಾ ವೈರಸ್
ಸೋಂಕಿತರೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ಮುಂಜಾಗ್ರತ ಕ್ರಮವಾಗಿ ಶಾಹಿನ್ ಸಂಸ್ಥೆಯ ಕ್ವಾರಂಟೈನ್ಲ್ಲಿಡಲಾಗಿದ್ದ 193 ಜನರ ಪೈಕಿ 50 ಮಂದಿಯ ವರದಿ ನೆಗೆಟಿವ್ ಬಂದಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ.
ನಗರದ ಹೊರ ವಲಯದಲ್ಲಿರುವ ಶಾಹಿನ್ ಕ್ವಾರಂಟೈನ್ನಲ್ಲಿ ಶಂಕಿತ ಸೋಂಕಿತರನ್ನು ಇಡಲಾಗಿತ್ತು. ರಕ್ತ ಹಾಗೂ ಗಂಟಲು ದ್ರವದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸದ್ಯ ವರದಿ ನೆಗೆಟಿವ್ ಬಂದ್ ಹಿನ್ನೆಲೆ ಅವರನ್ನು ಬಿಡುಗಡೆ ಮಾಡಲಾಗಿದೆ.
ಶಾಹಿನ್ ಕ್ವಾರಂಟೈನ್ನಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದ 193 ಜನರನ್ನು ತೀವ್ರ ನಿಗಾದಲ್ಲಿ ಇಡಲಾಗಿತ್ತು. ಓಲ್ಡ್ ಸಿಟಿ, ಸಿಂಗರ್ ಬಾಗ್ ಭಾಗದ ಮಕ್ಕಳು, ಮಹಿಳೆಯರು, ಪುರುಷರು ಕ್ವಾರಂಟೈನ್ಲ್ಲಿದ್ದರು. ಶಾಹಿನ್ ಕಾಲೇಜಿನಿಂದ ಶಾಲಾ ವಾಹನದಲ್ಲೇ ಅವರವರ ಮನೆಗಳಿಗೆ ವಾಪಸಾದ ಸಂದರ್ಭದಲ್ಲಿ ಬಡಾವಣೆ ನಿವಾಸಿಗರು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು. ಈ ವೇಳೆ ಕ್ವಾರಂಟೈನ್ನಿಂದ ಹೊರಬಂದವರು ಸಂತಸ ವ್ಯಕ್ತಪಡಿಸಿದರು.