ಕರ್ನಾಟಕ

karnataka

ETV Bharat / state

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ 50 ಕೋಟಿ: ಸಚಿವ ಪ್ರಭು ಚವ್ಹಾಣರಿಂದ ಸಿಎಂಗೆ ಅಭಿನಂದನೆ - ಸಿಎಂ ಬಿ.ಎಸ್ ಯಡಿಯೂರಪ್ಪ

ಕಳೆದ ಎರಡು ವರ್ಷಗಳಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡುವಂತೆ ಹಣ ಅನುದಾನ ನೀಡಿದ್ದಾರೆ ಎಂದು ಪ್ರಭು ಚವ್ಹಾಣ ತಿಳಿಸಿದರು.

50 crore for establishing Maratha Development Corporation
ಸಚಿವ ಪ್ರಭು ಚವ್ಹಾಣರಿಂದ ಸಿಎಂಗೆ ಅಭಿನಂದನೆ

By

Published : Nov 15, 2020, 1:52 AM IST

ಬೀದರ್: ಮರಾಠ ಸಮುದಾಯದ ಬಹುದಿನದ ಬೇಡಿಕೆಯಾದ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು 50 ಕೋಟಿ ರೂ. ಮೀಸಲಿಡಲು ಆದೇಶ ಮಾಡಿದಕ್ಕೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 50 ಕೋಟಿ ರೂ. ಮೀಸಲಿಡುವಂತೆ ಸೂಚನೆ ನೀಡಿದ್ದಾರೆ.

ಸಚಿವ ಪ್ರಭು ಚವ್ಹಾಣರಿಂದ ಸಿಎಂಗೆ ಅಭಿನಂದನೆ

ಇದಷ್ಟೇ ಅಲ್ಲದೆ ಮರಾಠ ಸಮುದಾಯಕ್ಕೆ 2ಎ ಪ್ರವರ್ಗದ ಮಾನ್ಯತೆಗಾಗಿ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದ್ದು ಸದ್ಯಕ್ಕೆ ಇರುವ 3 ಬಿ ಯಿಂದ 2 ಎ ಮಿಸಲಾತಿ ನೀಡುವಂತೆ ಸಮುದಾಯ ಒಕ್ಕೊರಿಲಿನಿಂದ ಮನವಿ ಮಾಡಿದೆ ಎಂದು ಪ್ರಭು ಚವ್ಹಾಣ ಭರವಸೆ ನೀಡಿದ್ದಾರೆ.

ABOUT THE AUTHOR

...view details