ಬೀದರ್: ಟ್ರಕ್ ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿ ಏಳು ಮಹಿಳೆಯರು ಸಾವನ್ನಪ್ಪಿರುವ ಘಟನೆ ಜಿಲ್ಲೆ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಗ್ರಾಮದ ಬಳಿ ನಡೆದಿದೆ. ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಜನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಹಿಳೆಯರು ಕೂಲಿ ಕೆಲಸ ಮುಗಿಸಿ ಆಟೋದಲ್ಲಿ ಬರುವಾಗ ಅಪಘಾತ ಸಂಭವಿಸಿದೆ. ಪಾರ್ವತಿ (40), ಪ್ರಭಾವತಿ (36), ಗುಂಡಮ್ಮ (60), ಯಾದಮ್ಮ (40), ಜಗ್ಗಮ್ಮ (34), ಈಶ್ವರಮ್ಮ (55) ಮತ್ತು ರುಕ್ಮೀಣಿ ಬಾಯಿ (60) ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.