ಕರ್ನಾಟಕ

karnataka

ETV Bharat / state

ಬೀದರ್ : 46 ಕೊರೊನಾ ಪ್ರಕರಣ ಪತ್ತೆ, 87 ಮಂದಿ ಗುಣಮುಖ - Bidar latest news

46 ಮಂದಿಗೆ ಸೋಂಕು ತಗುಲುವ ಮೂಲಕ‌ ಸೋಂಕಿತರ ಸಂಖ್ಯೆ 4,438ಕ್ಕೆ ಏರಿಕೆಯಾಗಿದೆ. ಈ ಪೈಕಿ 3,698 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ.

Bidar corona cases
Bidar corona cases

By

Published : Aug 29, 2020, 9:31 PM IST

ಬೀದರ್: ಜಿಲ್ಲೆಯಲ್ಲಿ ಇಂದು 46 ಜನರಿಗೆ ಸೋಂಕು ತಗುಲಿದ್ದು, 87 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯ ಔರಾದ್-05, ಬಸವಕಲ್ಯಾಣ-09, ಭಾಲ್ಕಿ-06, ಬೀದರ್- 18, ಹುಮನಾಬಾದ್-07 ಹಾಗೂ ಅನ್ಯ ರಾಜ್ಯದ ಒಬ್ಬರಲ್ಲಿ ಸೋಂಕು ತಗುಲಿರುವುದು ವರದಿಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,438ಕ್ಕೆ ಏರಿಕೆಯಾಗಿದೆ.

87 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಇಂದು ಬಿಡುಗಡೆಯಾಗಿದ್ದಾರೆ. ಈವರೆಗೆ ‌ಒಟ್ಟು 3,698 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 133 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ 603 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details