ಬೀದರ್: ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು ಮತ್ತೆ ಮೂವರು ಕೊನೆಯುಸಿರೆಳೆದಿದ್ದಾರೆ. 43 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬೀದರ್‌ನಲ್ಲಿ 43 ಜನರಿಗೆ ಕೊರೊನಾ ಸೋಂಕು ದೃಢ, 3 ಬಲಿ - Bidar corona case
ಜಿಲ್ಲೆಯಲ್ಲಿಂದು 43 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗುವ ಮೂಲಕ ಸೋಂಕಿತರ ಸಂಖ್ಯೆ 3,791ಕ್ಕೆ ತಲುಪಿದೆ. ಮತ್ತು ಮೂವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
Bidar corona cases
ಜಿಲ್ಲೆಯ ಔರಾದ್‌ನಲ್ಲಿ 4, ಬಸವಕಲ್ಯಾಣ 6, ಭಾಲ್ಕಿ 7, ಬೀದರ್ 20 ಹಾಗು ಹುಮನಾಬಾದ್‌ನಲ್ಲಿ 6 ಸೋಂಕಿತ ಪ್ರಕರಣಗಳು ವರದಿಯಾಗಿದೆ.
131 ಜನರು ಗುಣಮುಖರಾಗಿ ಇಂದು ಬಿಡುಗಡೆಯಾಗಿದ್ದಾರೆ. 3,791 ಸೋಂಕಿತರ ಪೈಕಿ 2,723 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಈವರೆಗೆ 119 ಜನರು ಮೃತಪಟ್ಟಿದ್ದು ಸದ್ಯ 945 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.