ಬಸವಕಲ್ಯಾಣ: ಕ್ಷೇತ್ರದ ವಿಧಾನಸಭೆ ಉಪಚುನಾವಣೆಯಲ್ಲಿ ಗೆಲುವಿಗಾಗಿ ಸೆಣಸುತ್ತಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತದಾನ ಮಾಡಿ ಗಮನ ಸೆಳೆದಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ದಿ. ಶಾಸಕ ಬಿ.ನಾರಾಯಣರಾವ್ ಪತ್ನಿ ಮಾಲಾ ಬಿ. ನಾರಾಯಣರಾವ್ ನಗರದ ತ್ರಿಪುರಾಂತದಲ್ಲಿರುವ ಮತಗಟ್ಟೆ ಕೇಂದ್ರ 21ರಲ್ಲಿ ಮತ ಚಲಾಯಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶರಣು ಸಲಗರ ರೈತ ಭವನದಲ್ಲಿಯ ಮತಗಟ್ಟೆ ಕೇಂದ್ರ 17ರಲ್ಲಿ, ಜೆಡಿಎಸ್ ಅಭ್ಯರ್ಥಿ ಸೈಯದ್ ಯಶ್ರಬ್ ಅಲಿ ಖಾದ್ರಿ 26ರಲ್ಲಿ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ನಗರದ ತ್ರಿಪುರಾಂತನಲ್ಲಿಯ ಮತಗಟ್ಟೆ ಕೇಂದ್ರ 20ರಲ್ಲಿ ಮತ ಚಲಾಯಿಸಿದರು.