ಬೀದರ್: ಕೊವಿಡ್-19 ವೈರಾಣು ಸೋಂಕಿನ ರೌದ್ರಾವತಾರ ಮುಂದುವರೆದಿದೆ. ಜಿಲ್ಲೆಯಲ್ಲಿಂದು 33 ಮಂದಿಗೆ ಸೋಂಕು ತಗುಲಿದ್ದು ಇಬ್ಬರು ಬಲಿಯಾಗಿದ್ದಾರೆ.
ಬೀದರ್‌ನಲ್ಲಿಂದು 33 ಮಂದಿಗೆ ಕೊರೊನಾ, ಇಬ್ಬರ ಸಾವು - ಬೀದರ್ ಸುದ್ದಿ
ಬೀದರ್‌ನಲ್ಲಿ ಇಂದಿನ ಕೊರೊನಾ ಪ್ರಕರಣಗಳ ಮಾಹಿತಿ ಇಲ್ಲಿದೆ..
bidar
ಔರಾದ್-08, ಬಸವಕಲ್ಯಾಣ-03, ಭಾಲ್ಕಿ-11, ಬೀದರ್-08 ಹಾಗೂ ಹುಮನಾಬಾದ್ -03 ಜನರಿಗೆ ಸೋಂಕು ದೃಢವಾಗಿದೆ. ಇಂದು 46 ಜನರು ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 2,941 ಕ್ಕೆ ಏರಿಕೆಯಾಗಿದ್ದು 99 ಜನರು ಸಾವನ್ನಪ್ಪಿದ್ದಾರೆ. 1,940 ಜನ ಸೋಂಕಿತರು ಗುಣಮುಖರಾಗಿದ್ದು 898 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು, 733 ಜನರ ಗಂಟಲು ದ್ರವದ ಮಾದರಿಯ ಪರಿಕ್ಷಾ ವರದಿ ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.