ಬೀದರ್ :ಜಿಲ್ಲೆಯಲ್ಲಿಮಹಾರಾಷ್ಟ್ರದಿಂದ ವಾಪಸಾದವರಲ್ಲಿ ಹೆಚ್ಚಿನವರು ಕೋವಿಡ್ ಸೋಂಕಿಗೆ ತುತ್ತಾಗುತ್ತಿದ್ದಾರೆ. ಭಾನುವಾರ 33 ಮಂದಿಗೆ ಪಾಸಿಟಿವ್ ಬಂದಿದ್ದು, ಓರ್ವ ಮೃತಪಟ್ಟಿದ್ದಾರೆ.
ಹೊಸದಾಗಿ ಗುರುತಿಸಲಾದ ನಿರ್ಬಂಧಿತ ಪ್ರದೇಶದಲ್ಲಿ 7 ಸೇರಿ ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್, ಬೀದರ್, ಕಮಲಾನಗರ ಹಾಗೂ ಚಿಟಗುಪ್ಪ ತಾಲೂಕುಗಳಲ್ಲಿ ಹೊಸ ಪ್ರಕರಣ ಪತ್ತೆಯಾಗಿವೆ. ಚಿಟಗುಪ್ಪ ಪಟ್ಟಣದ ನಿರ್ಬಂಧಿತ ಪ್ರದೇಶದ 75 ವಯಸ್ಸಿನ ವ್ಯಕ್ತಿಯೊಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಅವರ ಕೋವಿಡ್-19 ವರದಿ ಕೂಡ ಪಾಸಿಟಿವ್ ಬಂದಿದೆ.
ಬೀದರ್ ತಾಲೂಕಿನ ರಾಜಗೀರಾದಲ್ಲಿ 5, ಬಗದಲದಲ್ಲಿ 2, ಬಸವಕಲ್ಯಾಣ ತಾಲೂಕಿನ ಮಿರಕಲ್ನಲ್ಲಿ 3, ರಾಜೋಳಾದಲ್ಲಿ 2, ಮನ್ನಳ್ಳಿಯಲ್ಲಿ 1, ಉಜಳಂಬದಲ್ಲಿ 2, ಭಾಲ್ಕಿ ತಾಲೂಕಿನ ದಾಡಗಿಯಲ್ಲಿ 3, ಲಾಧಾದಲ್ಲಿ 1, ಖಟಕ ಚಿಂಚೋಳಿಯಲ್ಲಿ 1, ಕೊಸಂನಲ್ಲಿ 1, ಸೋಮಾಪುರದಲ್ಲಿ 1 ಮತ್ತು ಭಾಲ್ಕಿ ಪಟ್ಟಣದ ಜೋಶಿ ಗಲ್ಲಿಯಲ್ಲಿ 2, ಚಿಟಗುಪ್ಪ ಪಟ್ಟಣದಲ್ಲಿ 7, ಹುಮನಾಬಾದ್ ತಾಲೂಕಿನ ವಾಂಜರಿಯಲ್ಲಿ 1, ಧನಗರಲ್ಲಿಯಲ್ಲಿ 1, ಕಮಲಾನಗರ ತಾಲೂಕಿನ ಮುಧೋಳ(ಕೆ) ಗ್ರಾಮದಲ್ಲಿ ಒಂದು ಹೊಸ ಪ್ರಕರಣ ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ. ಒಟ್ಟು 5 ಜನ ಮೃತಪಟ್ಟಿದ್ದಾರೆ.