ಬೀದರ್: ಜಿಲ್ಲೆಯಲ್ಲಿಂದು 32 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 647ಕ್ಕೆ ಏರಿಕೆಯಾಗಿದೆ.
32 ಮಂದಿಯಲ್ಲಿ ಸೋಂಕು ದೃಢ....ಸೋಂಕಿತರ ಸಂಖ್ಯೆ 647ಕ್ಕೆ ಏರಿಕೆ
ಜಿಲ್ಲೆಯಲ್ಲಿಂದು 32 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 647ಕ್ಕೆ ಏರಿಕೆಯಾಗಿದೆ. 21 ಮಂದಿ ಈ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ.
Bidar corona case
ಜಿಲ್ಲೆಯ ಔರಾದ್ ನಲ್ಲಿ-14, ಬೀದರ್-11, ಬಸವಕಲ್ಯಾಣ-02, ಭಾಲ್ಕಿ-04, ಹಾಗೂ ಕಮಲನಗರದಲ್ಲಿ 01 ಪ್ರಕರಣ ಸೇರಿದಂತೆ 32 ಜನರಲ್ಲಿ ಸೋಂಕು ದೃಢವಾಗಿದೆ.
ಜಿಲ್ಲಾಡಳಿತ ಈವರೆಗೆ 38,989 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿದ್ದು, 36,436 ವರದಿ ನೆಗೆಟಿವ್ ಬಂದಿದೆ. 21 ಜನರು ಸಾವನಪ್ಪಿದ್ದಾರೆ. ಸದ್ಯ 126 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 1906 ಜನರ ಪರೀಕ್ಷಾ ವರದಿ ಬಾಕಿ ಇದೆ.