ಕರ್ನಾಟಕ

karnataka

ETV Bharat / state

ಬೀದರ್​ ಪಶು ವಿವಿಯಲ್ಲಿ ₹ 32 ಕೋಟಿ ಅವ್ಯವಹಾರ... ತನಿಖೆಗೆ ಸಚಿವರ ಸೂಚನೆ - ಬೀದರ್ ಗೋಲ್​ಮಾಲ್​ ಸುದ್ದಿ

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 32 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಸಂಘಟನೆಯೊಂದು ಆರೋಪಿಸಿ ದೂರು ನೀಡಿದೆ.

ಸಚಿವ ಪ್ರಭು ಚವ್ಹಾಣ್

By

Published : Nov 13, 2019, 7:01 AM IST

ಬೀದರ್: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 32 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರಿಗೆ ದೂರು ನೀಡಲಾಗಿದೆ.

ಬೀದರ್​ ಪಶು ವಿವಿಗೆ ಸಚಿವ ಪ್ರಭು ಚವ್ಹಾಣ್ ಭೇಟಿದೂರನ್ನು ಗಂಭೀರವಾಗಿ ತೆಗೆದುಕೊಂಡ ಸಚಿವರು, ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾನಿಲಯಕ್ಕೆ ದಿಢೀರನೇ ಭೇಟಿ ನೀಡಿ ಲಿಖಿತವಾಗಿ ಬಂದ 32 ಕೋಟಿ ರೂ.ಗಳ ಅವ್ಯವಹಾರ ದೂರಿನ ಬಗ್ಗೆ ಸಚಿವರು ಕುಲಪತಿಯೊಂದಿಗೆ ಚರ್ಚಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ವರದಿ ನೀಡುವಂತೆ ವಿವಿಯ ಉಪ ಕುಲಪತಿ ಎಚ್.ಡಿ. ನಾರಾಯಣಸ್ವಾಮಿ ಅವರಿಗೆ ಸೂಚಿಸಿದ್ದಾರೆ.

ಅಂತಹ ಯಾವುದೇ ಅವ್ಯವಹಾರ ವಿವಿಯಲ್ಲಿ ನಡೆದಿಲ್ಲ ಎಂದು ಉಪ ಕುಲಪತಿ ಸ್ಪಷ್ಟನೆ ನೀಡಿದ್ದರೂ ಸಮಾಧಾನಗೊಳ್ಳದ ಸಚಿವರು, ತನಿಖಾ ವರದಿ ನೀಡುವಂತೆ ಸೂಚಿಸಿದರು.

ಒಂದು ವೇಳೆ ಅವ್ಯವಹಾರ ನಡೆದಿರುವುದು ಸಾಬೀತಾದಲ್ಲಿ ಕುಲಪತಿಯವರ ಮೇಲೆ ಕ್ರಮ ಜರುಗಿಸಲು ರಾಜ್ಯಪಾಲರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ. ಈ ಬಳಿಕ ಅಚಿವರು ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಭೇಟಿ ನೀಡಿ, ಅಲ್ಲಿನ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.

ABOUT THE AUTHOR

...view details