ಬೀದರ್:ಜಿಲ್ಲೆಯಲ್ಲಿ ಮತ್ತೆ ಎರಡು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ದೆಹಲಿಯ ಜಮಾತ್ಗೆ ಹೋಗಿ ಬಂದ ಸೋಂಕಿತರ ಸಂಪರ್ಕದಲ್ಲಿರುವ ಇಬ್ಬರು ಮಹಿಳೆಯರಿಗೆ ಸೋಂಕು ದೃಢವಾಗಿದೆ.
ಬೀದರ್ನಲ್ಲಿ ಮತ್ತೆ 2 ಕೊರೊನಾ ಸೋಂಕು ಪತ್ತೆ; ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಚಿವರ ಮನವಿ - bidar latest news
ದೆಹಲಿ ಜಮಾತ್ಗೆ ಹೊಗಿ ಬಂದ 10 ಜನರ ಪೈಕಿ ಕೇಸ್ ನಂಬರ್ 211ರ ಸಂಪರ್ಕದಲ್ಲಿದ್ದ ಇಬ್ಬರು ಮಹಿಳೆಯರಿಗೆ ಕೊರೊನಾ ಸೋಂಕು ದೃಢವಾಗಿದೆ.
ಸದ್ಯ ಓಲ್ಡ್ ಸಿಟಿಯ ನಿವಾಸಿಗಳಲ್ಲಿ ಸೋಂಕು ಪತ್ತೆಯಾಗಿದೆ. ದೆಹಲಿ ಜಮಾತ್ಗೆ ಹೋಗಿ ಬಂದ 10 ಜನರ ಪೈಕಿ ಕೇಸ್ ನಂಬರ್ 211ರ ಸಂಪರ್ಕದಲ್ಲಿದ್ದ (35)ವರ್ಷದ ಮಗಳು ಹಾಗೂ ಸಹೋದರನ 16 ವರ್ಷದ ಮಗಳಲ್ಲಿ ಸೋಂಕು ಪತ್ತೆಯಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮಾತನಾಡಿ, ಯಾದಗಿ ಹಾಗೂ ಬೀದರ್ ಜಿಲ್ಲೆಯ ಜನರಲ್ಲಿ ಮನೆಯಿಂದ ಹೊರ ಬಾರದಂತೆ ಮನವಿ ಮಾಡಿಕೊಂಡರು. ಸೋಂಕಿತರ ಸಂಪರ್ಕದಲ್ಲಿರುವವರು ಮುಂಜಾಗ್ರತೆ ವಹಿಸದೇ ಇರುವುದಕ್ಕಾಗಿ ಈ ಮಹಾಮಾರಿ ಹೆಚ್ಚಾಗಿದೆ. ಜಿಲ್ಲೆಯ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು, ಈ ಕೊರೊನಾ ಸಮಸ್ಯೆಯನ್ನು ಹೊಡೆದೋಡಿಸಬೇಕು ಎಂದು ಮನವಿ ಮಾಡಿದ್ದಾರೆ.