ಬೀದರ್ :ಸರಗಳ್ಳತನ ಆರೋಪದಲ್ಲಿ ಬಂಧಿಸಲಾಗಿದ್ದ 8 ಮಂದಿ ಆರೋಪಿಗಳಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಇದೀಗ ಬಂಧಿಸಿದ್ದ ಪೊಲೀಸರಿಗೂ ಭೀತಿ ಎದುರಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಕೊರಳಿನಿಂದ ಸರಗಳ್ಳತನ ಮಾಡ್ತಿದ್ದ ಇರಾನಿ ಗ್ಯಾಂಗ್ನ ಇಬ್ಬರು ಆರೋಪಿಗಳು ಇವರಾಗಿದ್ದು, ಸಂತಪೂರ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿತ್ತು.
ಇರಾನಿ ಗ್ಯಾಂಗ್ನ ಒಟ್ಟು 8 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಕಳ್ಳತನ ಮಾಡಿ ಬೈಕ್ ಮೂಲಕ ಪರಾರಿಯಾಗುವ ಈ ಗ್ಯಾಂಗ್ ಸಂತಪೂರನಿಂದ ವಡಗಾಂವ್ ರಸ್ತೆಯತ್ತ ಹೊರಟಿರುವಾಗ ಬೋರ್ಗಿ ಗ್ರಾಮಸ್ಥರ ಸಹಾಯದಿಂದ ಪೊಲೀಸರು ಅರೆಸ್ಟ್ ಮಾಡಿದ್ದರು. ಆರೋಪಿಗಳನ್ನು ಜೈಲಿಗೆ ಕಳಿಸುವುದಕ್ಕೂ ಮೊದಲು ನ್ಯಾಯಾಲಯದ ಆದೇಶದ ಮೇರೆಗೆ ಎಲ್ಲಾ ಆರೋಪಿಗಳ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ ಇಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ.