ಬಸವಕಲ್ಯಾಣ:ಮಹಾಮಾರಿ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಮಾಜಿ ಸಿಎಂ ಎನ್. ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಉಚಿತ ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗಿದೆ.
ಧರ್ಮಸಿಂಗ್ ಫೌಂಡೇಶನ್ನಿಂದ ಉಚಿತ ಆ್ಯಂಬುಲೆನ್ಸ್ ಸೇವೆಗೆ ಚಾಲನೆ - 2 free ambulance service started by Dharamsigh Foundation
ಮಾಜಿ ಸಿಎಂ ಎನ್. ಧರ್ಮಸಿಂಗ್ ಫೌಂಡೇಶನ್ ವತಿಯಿಂದ 2 ಆ್ಯಂಬುಲೆನ್ಸ್ಗಳನ್ನು ಜಿಲ್ಲೆಯ ಜನರ ಸೇವೆಗೆಂದು ನೀಡಲಾಗಿದೆ. ಆ್ಯಂಬುಲೆನ್ಸ್ ಸೇವೆ ಅಗತ್ಯವಿದ್ದಲ್ಲಿ ಸಾರ್ವಜನಿಕರು 9620181108 ಮತ್ತು 9620171108 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.
ambulance
ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ ಪುತ್ರ, ವಿಧಾನಪರಿಷತ್ ಸದಸ್ಯ ವಿಜಯಸಿಂಗ್ ನೇತೃತ್ವದಲ್ಲಿ ತಾಲೂಕಿನ ಜನರ ತುರ್ತು ಆರೋಗ್ಯ ಸೇವೆಗಾಗಿ ನೀಡಿದ 2 ಆ್ಯಂಬುಲೆನ್ಸ್ಗೆ ಪೂಜೆ ಸಲ್ಲಿಸಲಾಯಿತು. ಈ ಬಳಿಕ ತಹಸೀಲ್ದಾರ್ ಸಾವಿತ್ರಿ ಸಲಗರ ಚಾಲನೆ ನೀಡಿದರು.
ಆ್ಯಂಬುಲೆನ್ಸ್ ಸೇವೆ ಅಗತ್ಯವಿದ್ದಲ್ಲಿ ಸಾರ್ವಜನಿಕರು 9620181108 ಮತ್ತು 9620171108 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.
Last Updated : May 19, 2021, 7:27 AM IST