ಕರ್ನಾಟಕ

karnataka

ETV Bharat / state

ಬೀದರ್: ಎರಡು ಪ್ರತ್ಯೇಕ ವಾಹನ ಅಪಘಾತದಲ್ಲಿ ಇಬ್ಬರು ಸಾವು - ಬೀದರ್ ಲೆಟೆಸ್ಟ್ ನ್ಯೂಸ್

ಹುಲಸೂರ ತಾಲೂಕಿನ ಸೋಲದಾಬಕಾ ಗ್ರಾಮದ ಬಳಿ ಹಾಗು ಬಸವಕಲ್ಯಾಣ ತಾಲೂಕಿನ ತಡೊಳಾ ಗ್ರಾಮದಲ್ಲಿ ವಾಹನ ಅಪಘಾತ ಸಂಭವಿಸಿದೆ.

Road accident
Road accident

By

Published : Jul 21, 2020, 8:55 PM IST

ಬೀದರ್:ಎರಡು ಪ್ರತ್ಯೇಕ ವಾಹನ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಹುಲಸೂರ ತಾಲೂಕಿನ ಸೋಲದಾಬಕಾ ಗ್ರಾಮದ ಬಳಿ ಟಾಟಾ ಗೂಡ್ಸ್ ವಾಹನ ಟೈರ್ ಒಡೆದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಯೂಸುಫ್ ದಾವಲಜಿ(29) ಎಂಬಾತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಮಕದುಮ್ಮ, ಮುಖೇನ್ ಹಾಗೂ ಚಾಲಕ ನೂರ್ ಎಂಬವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಹುಲಸೂರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಸವಕಲ್ಯಾಣ ತಾಲೂಕಿನ ತಡೊಳಾ ಗ್ರಾಮದಲ್ಲಿ ಗೂಡ್ಸ್ ಪಿಕ್ ಅಪ್ ವಾಹನ ಅಪಘಾತಕ್ಕೀಡಾಗಿದೆ. ಪರಿಣಾಮ ಚಿಟಗುಪ್ಪ ತಾಲೂಕಿನ ಮಾಡಗೋಳ ಗ್ರಾಮದ ನಿವಾಸಿ ಆಕಾಶ ಶಾಂತಪ್ಪ(25) ಎಂಬವರು ಮೃತಪಟ್ಟಿದ್ದಾರೆ.

ABOUT THE AUTHOR

...view details