ಕರ್ನಾಟಕ

karnataka

ETV Bharat / state

ಸೋಂಕಿಗೆ ಇಬ್ಬರು ಬಲಿ, 65 ಮಂದಿಯಲ್ಲಿ ಸೋಂಕು ದೃಢ - ಬೀದರ್ ಲೆಟೆಸ್ಟ್ ನ್ಯೂಸ್

ಬೀದರ್ ತಾಲೂಕಿನ 30 ವರ್ಷದ ಮಹಿಳೆ ಹಾಗೂ 75 ವರ್ಷದ ವೃದ್ಧರೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಮೃತರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ..

Bidar corona case
Bidar corona case

By

Published : Jul 21, 2020, 9:23 PM IST

ಬೀದರ್ :ಜಿಲ್ಲೆಯಲ್ಲಿ ಕೊರೊನಾದಿಂದ ಇಂದು ಇಬ್ಬರು ಬಲಿಯಾಗಿದ್ದಾರೆ. 65 ಜನರಲ್ಲಿ ಸೋಂಕು ದೃಢಪಟ್ಟಿದೆ.

ಜಿಲ್ಲೆಯ ಹುಮನಾಬಾದ್, ಭಾಲ್ಕಿ, ಬಸವಕಲ್ಯಾಣ, ಔರಾದ್ ಹಾಗೂ ಬೀದರ್ ತಾಲೂಕಿನಾದ್ಯಂತ 65 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ 1468ಕ್ಕೆ ಏರಿಕೆಯಾಗಿದೆ.

ಬೀದರ್ ತಾಲೂಕಿನ 30 ವರ್ಷದ ಮಹಿಳೆ ಹಾಗೂ 75 ವರ್ಷದ ವೃದ್ಧರೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಮೃತರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ. ಈ ಪೈಕಿ ಇಬ್ಬರು ಅನ್ಯ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details