ಬಸವಕಲ್ಯಾಣ: ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಕಂಡುಬರುತ್ತಿವೆ. ಓರ್ವ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಬಸವಕಲ್ಯಾಣ: 70 ವರ್ಷದ ವೃದ್ಧೆಗೆ ಸೋಂಕು, ಇಬ್ಬರು ಬಲಿ - ಬಸವಕಲ್ಯಾಣ ಕೊರೊನಾ ನ್ಯೂಸ್
ಓರ್ವ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 495ಕ್ಕೆ ತಲುಪಿದೆ.
![ಬಸವಕಲ್ಯಾಣ: 70 ವರ್ಷದ ವೃದ್ಧೆಗೆ ಸೋಂಕು, ಇಬ್ಬರು ಬಲಿ Basavakalyana corona case](https://etvbharatimages.akamaized.net/etvbharat/prod-images/768-512-09:26:32:1596902192-kn-bdr-8-2-corona-2-death-case-confirmed-kac10003-08082020202256-0808f-1596898376-928.jpeg)
Basavakalyana corona case
ಅನಾರೋಗ್ಯದಿಂದ ಬಳಲಿ ಬೀದರ್‌ನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ನಗರದ ಮಲ್ಲಿಕಾರ್ಜುನ ಗಲ್ಲಿಯ 90 ವರ್ಷದ ವೃದ್ಧ ಆ.5 ರಂದು ಚಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ತಾಲೂಕಿನ ಖೇರ್ಡಾ (ಬಿ) ಗ್ರಾಮದ 25 ವರ್ಷದ ಯುವಕ ರಸ್ತೆ ಅಪಘಾತದಿಂದ ಗಾಯಗೊಂಡು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಈತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಇಬ್ಬರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇನ್ನು, ನಗರದ 70 ವರ್ಷದ ವೃದ್ಧೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 495ಕ್ಕೆ ತಲುಪಿದೆ.