ಬೀದರ್: ಇಂದು ಸಂಜೆ ಸುರಿದ ಮಳೆಯ ವೇಳೆ ಎರಡು ಪ್ರತ್ಯೇಕ ಘಟನೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವನಪ್ಪಿದ್ದಾರೆ.
ಬೀದರ್: ಸಿಡಿಲು ಬಡಿದು ಇಬ್ಬರ ದುರ್ಮರಣ, ಓರ್ವನಿಗೆ ಗಂಭೀರ ಗಾಯ - ಸಿಡಿಲು ಬಡಿದು ದುರ್ಮರಣ
ಬೀದರ್ ಜಿಲ್ಲೆಯ ಸೊಲಪುರ್ ಗ್ರಾಮದ ಪೀರಪ್ಪ (50) ಸಿಡಿಲು ಬಡಿದು ಸಾವನಪ್ಪಿದ್ದಾರೆ. ಮಳೆ ಬರುವ ವೇಳೆ ಆಸರೆ ಪಡೆಯಲು ನಗರದ ಹೊರ ವಲಯದ ಪಂಚಮುಖಿ ಹನುಮಾನ ದೇವಸ್ಥಾನದ ಪಕ್ಕದಲ್ಲಿನ ಗುಂಬಜ ಬಾಗಿಲಲ್ಲಿ ನಿಂತಿದ್ದ ವೇಳೆ, ಒಮ್ಮೆಲೆ ಅಪ್ಪಳಿಸಿದ ಸಿಡಿಲಿಗೆ ಸ್ಥಳದಲ್ಲೇ ಪೀರಪ್ಪ ಸಾವನ್ನಪ್ಪಿದ್ದಾರೆ.
ಸೊಲಪುರ್ ಗ್ರಾಮದ ಪೀರಪ್ಪ(50) ಸಿಡಿಲು ಬಡಿದು ಸಾವನಪ್ಪಿದ್ದಾರೆ. ಮಳೆ ಬರುವ ವೇಳೆ ಆಸರೆ ಪಡೆಯಲು ನಗರದ ಹೊರ ವಲಯದ ಪಂಚಮುಖಿ ಹನುಮಾನ ದೇವಸ್ಥಾನದ ಬಳಿಯ ಗುಂಬಜ ಬಾಗಿಲಿನಲ್ಲಿ ನಿಂತಿದ್ದ ವೇಳೆ, ಸಿಡಿಲು ಬಡಿದು ಸ್ಥಳದಲ್ಲೇ ಪೀರಪ್ಪ ಸಾವನ್ನಪ್ಪಿದ್ದಾರೆ.
ಮಹಮ್ಮದ್ ನಿಜಾಮುದ್ದಿನ್(40) ಈತ ಚಿಟಗುಪ್ಪ ಪಟ್ಟಣದ ಹೊರ ವಲಯದ ಚರ್ಚ್ ಬಳಿ ಸಿಡಿಲಿಗೆ ಬಲಿಯಾಗಿದ್ದಾರೆ. ಇವರ ಜೊತೆಯಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು, ಈ ಪೈಕಿ ಗಂಭೀರವಾಗಿ ಗಾಯಗೊಂಡ ಓರ್ವನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.