ಕರ್ನಾಟಕ

karnataka

ETV Bharat / state

ಮೊಬೈಲ್ ಕದ್ದು ಸಿಕ್ಕಿಬಿದ್ದ, ಮರ್ಯಾದೆಗೆ ಹೆದರಿ ಆತ್ಮಹತ್ಯೆಗೆ ಶರಣಾದ 16 ರ ಬಾಲಕ - ಬಾಲಕ ಆತ್ಮಹತ್ಯೆ

ಬಾಲಕನೋರ್ವ ತನ್ನ ಸಂಬಂಧಿಕರ ಮೊಬೈಲ್ ಕಳವು ಮಾಡಿ ಸಿಕ್ಕಿಬಿದ್ದ ಹಿನ್ನೆಲೆ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

suicide
ಆತ್ಮಹತ್ಯೆ

By

Published : Jan 1, 2021, 5:44 PM IST

ಬಸವಕಲ್ಯಾಣ:ಮೊಬೈಲ್ ಕಳವು ಮಾಡಿದ ನಂತರ ಸಿಕ್ಕಿಬಿದ್ದ ಬಾಲಕನೊಬ್ಬ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯರಂಡಗಿ ಗ್ರಾಮದಲ್ಲಿ ನಡೆದಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಪರ ಊರಿನಲ್ಲಿ ಜರುಗಿದ ತಮ್ಮ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲೆಂದು ತೆರಳಿದ ಬಾಲಕ, ಅಲ್ಲಿಯ ಸಂಬಂಧಿಕರ ಯುವಕನೊಬ್ಬನ ಮೊಬೈಲ್ ಕಳವು ಮಾಡಿದ್ದಾನೆ. ಮೊಬೈಲ್ ಕದ್ದ ನಂತರ ಅದರಲ್ಲಿನ ಸಿಮ್ ಕಾರ್ಡ್ ತೆಗೆದು ತನ್ನ ಬಳಿಯಿದ್ದ ಹೊಸ ಸಿಮ್ ಕಾರ್ಡ್ ಉಪಯೋಗಿಸಿದ್ದಾನೆ. ಆದರೆ ಸಿಮ್ ಬದಲಿಸಿದ ನಂತರ ಮೊಬೈಲ್​ನಲ್ಲಿ ಇದ್ದ ವಾಟ್ಸ್ಆಪ್ ನಂಬರ್ ಬದಲಿಸದೆ ಹಳೆ ನಂಬರ್​ನಿಂದಲೆ ವಾಟ್ಸ್ಆಪ್ ಉಪಯೋಗಿಸುತ್ತಿದ್ದ ಎನ್ನಲಾಗಿದೆ.

ಇದನ್ನು ಗಮನಿಸಿದ ಮೊಬೈಲ್ ಕಳೆದುಕೊಂಡ ಯುವಕ, ವಾಟ್ಸ್ಆಪ್​ನಲ್ಲಿ ವಿಡಿಯೋ ಕಾಲ್ ಮಾಡಿ ಮೊಬೈಲ್ ಕಳವು ಮಾಡಿದ ಬಾಲಕನ ಮುಖ ಗಮನಿಸಿದ್ದಾನೆ. ತಕ್ಷಣ ಯರಂಡಗಿ ಗ್ರಾಮಕ್ಕೆ ಆಗಮಿಸಿ ಮೊಬೈಲ್ ಹಿಂದಿರುಗಿಸುವಂತೆ ಒತ್ತಾಯಿಸಿದ್ದಲ್ಲದೆ ಕಳ್ಳತನದ ವಿಷಯವನ್ನು ಮನೆಯವರಿಗೆ ತಿಳಿಸುತ್ತೇನೆ ಎಂದು ಎಚ್ಚರಿಸಿದ್ದಾನೆ ಎನ್ನಲಾಗಿದೆ. ಭೀತನಾದ ಬಾಲಕ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈ ಕುರಿತು ಮೃತ ಬಾಲಕನ ಪಾಲಕರು ನೀಡಿದ ದೂರಿನ ಆಧಾರದ ಮೇಲೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details