ಬಸವಕಲ್ಯಾಣ(ಬೀದರ್):ತಾಲೂಕಿನ ಗಡಿ ಭಾಗದಲ್ಲಿರುವ ಚಂಡಕಾಪುರದ ಸಮೀಪ ನಕಲಿ ಪಾಸ್ ಸೃಷ್ಟಿಸಿ ಮುಂಬೈನಿಂದ ಪ್ರಯಾಣಿಕರನ್ನ ಕರೆ ತರುತ್ತಿದ್ದ ಖಾಸಗಿ ಬಸ್ವೊಂದನ್ನ ಜಪ್ತಿ ಮಾಡಲಾಗಿದೆ.
ನಕಲಿ ಪಾಸ್ ಸೃಷ್ಟಿಸಿ ಮುಂಬೈನಿಂದ 15 ಪ್ರಯಾಣಿಕರ ಸಾಗಾಟ: ಖಾಸಗಿ ಬಸ್ ಜಪ್ತಿ - ಬೀದರ್ ಸುದ್ದಿ
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗಡಿ ಭಾಗದಲ್ಲಿರುವ ಚಂಡಕಾಪುರದ ಸಮೀಪ ನಕಲಿ ಪಾಸ್ ಸೃಷ್ಟಿಸಿ, ಮುಂಬೈನಿಂದ 15 ಪ್ರಯಾಣಿಕರನ್ನ ಕರೆ ತರುತ್ತಿದ್ದ ಖಾಸಗಿ ಬಸ್ವೊಂದನ್ನ ಜಪ್ತಿ ಮಾಡಲಾಗಿದೆ.
ನಕಲಿ ಪಾಸ್ ಸೃಷ್ಟಿಸಿ ಮುಂಬೈನಿಂದ 15 ಪ್ರಯಾಣಿಕರ ಸಾಗಾಟ..ಖಾಸಗಿ ಬಸ್ ಜಪ್ತಿ
ಮಹಾರಾಷ್ಟ್ರದ ಗಡಿಯಲ್ಲಿ ಬಸವಕಲ್ಯಾಣ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ನಕಲಿ ಪಾಸ್ ಸೃಷ್ಟಿಸಿ ನಟಕರ್ ಟ್ರಾವೆಲ್ಸ್ ಹೆಸರಿನ ಖಾಸಗಿ ಬಸ್‌ನಲ್ಲಿ ಮಹಾರಾಷ್ಟ್ರದ ಮುಂಬೈನಿಂದ ಬಸವಕಲ್ಯಾಣಕ್ಕೆ 15ಕ್ಕೂ ಹೆಚ್ಚಿನ ಪ್ರಯಾಣಿಕರನ್ನ ಕರೆ ತರುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬಸ್ ಚಾಲಕ ಹಾಗೂ ಮಾಲೀಕನ ವಿರುದ್ಧ ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.