ಬೀದರ್:ಜಿಲ್ಲೆಯಲ್ಲಿ ಈವರೆಗೆ ಕೊರೊನಾ ವೈರಸ್ ಸೋಂಕು 14 ಜನರಲ್ಲಿ ಪತ್ತೆಯಾಗಿದೆ. ಒಟ್ಟು 1,332 ಜನರ ಗಂಟಲು ದ್ರವದ ಸ್ಯಾಂಪಲ್ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 913 ಜನರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.
ಬೀದರ್ನಲ್ಲಿ ಈವರೆಗೆ 14 ಜನರಲ್ಲಿ ಸೋಂಕು ದೃಢ: 913 ಜನರ ವರದಿ ಬಾಕಿ
ರಾಜ್ಯಾದ್ಯಂತ ಕೊರೊನಾ ಸೋಂಕು ತಗುಲಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಈ ನಡುವೆ ಬೀದರ್ ಜಿಲ್ಲಾಡಳಿತ ಕೊರೊನಾ ಬುಲೆಟಿನ್ ಬಿಡುಗಡೆ ಮಾಡಿದೆ. ಈವರೆಗೆ ಜಿಲ್ಲೆಯಲ್ಲಿ 14 ಕೊರೊನಾ ಪಾಸಿಟಿವ್ ವರದಿಯಾಗಿವೆ. ಒಟ್ಟಾರೆ 1,332 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಇದರಲ್ಲಿ 913 ಜನರ ವರದಿ ಬರಬೇಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೀದರ್ನಲ್ಲಿ ಈವರೆಗೆ 14 ಜನರಲ್ಲಿ ಸೋಂಕು ದೃಢ: 913 ಜನರ ವರದಿ ಇನ್ನೂ ಬಾಕಿ
ಈ ಕುರಿತು ಜಿಲ್ಲಾಡಳಿತ ಕೊರೊನಾ ಬುಲೆಟಿನ್ ಹೊರಡಿಸಿದೆ. ಇಲ್ಲಿಯವರೆಗೆ ಜಿಲ್ಲಾಡಳಿತ ಒಟ್ಟು 1,332 ಜನರ ಗಂಟಲ ದ್ರವ, ರಕ್ತದ ಮಾದರಿಯನ್ನು ಲ್ಯಾಬ್ಗೆ ಕಳುಹಿಸಲಾಗಿತ್ತು ಎಂದು ತಿಳಿಸಿದೆ. ಇದರಲ್ಲಿ 14 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. 405 ಜನರ ವರದಿ ನೆಗೆಟಿವ್ ಬಂದಿದೆ.
14 ಪಾಸಿಟಿವ್ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಒಟ್ಟು 1,866 ಜನರಿಗೆ ಹೋಮ್ ಕ್ವಾರಂಟೈನ್ನಲ್ಲಿ ನಿಗಾವಹಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.