ಕರ್ನಾಟಕ

karnataka

ETV Bharat / state

ಬೀದರ್​ದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14ಕ್ಕೇರಿಕೆ: 554 ಶಂಕಿತರ ವರದಿ ಬಾಕಿ! - ಬೀದರ್​ನಲ್ಲಿ ಕೊರೊನಾ ಸೋಂಕು ದೃಢ

ಗಡಿ ಜಿಲ್ಲೆ ಬೀದರ್​​ನಲ್ಲಿ ಇಂದು ಕೊರೊನಾ ಪ್ರಕರಣಗಳು 14ಕ್ಕೆ ಏರಿವೆ. ದೆಹಲಿಯ ತಬ್ಲಿಘಿ ಜಮಾತ್​ಗೆ ತೆರಳಿ ವಾಪಸಾದವರೂ ಇದರಲ್ಲಿ ಸೇರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

corona cases confirmed in bidar
ಬೀದರ್​ದಲ್ಲಿ ಸೋಂಕಿತರ ಸಂಖ್ಯೆ 14ಕ್ಕೇರಿಕೆ

By

Published : Apr 17, 2020, 9:40 PM IST

ಬೀದರ್:ದೆಹಲಿಯಲ್ಲಿ ತಬ್ಲಿಘಿ ಜಮಾತ್​ಗೆ ಹೋಗಿ ಬಂದವರ ಸಂಪರ್ಕದಲ್ಲಿರುವವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇಂದು ಸೋಂಕಿತರ ಸಂಖ್ಯೆ 14ಕ್ಕೆ ಏರಿದೆ. ಗಡಿ ಜಿಲ್ಲೆ ಬೀದರ್​ನಲ್ಲಿ ಒಟ್ಟು 554 ಶಂಕಿತರ ಗಂಟಲು ದ್ರವ ಹಾಗೂ ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ವರದಿ ಪ್ರಕಟಿಸಿದೆ.

ಬೀದರ್​ದಲ್ಲಿ ಸೋಂಕಿತರ ಸಂಖ್ಯೆ 14ಕ್ಕೇರಿಕೆ

ಜಿಲ್ಲೆಯಲ್ಲಿ 18 ವಯಸ್ಸಿನ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ನಗರದ ಹಳೇ ಸಿಟಿಯಲ್ಲಿ ಸೋಂಕಿತರ ಸಂಖ್ಯೆ 12 ಇದ್ದು, ಮನ್ನಾಖೆಳ್ಳಿ ಹಾಗೂ ಬಸವಕಲ್ಯಾಣದಲ್ಲಿ ತಲಾ ಒಂದೊಂದು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಬೀದರ್​ದಲ್ಲಿ ಸೋಂಕಿತರ ಸಂಖ್ಯೆ 14ಕ್ಕೇರಿಕೆ

ಈಗಾಗಲೇ ಕಲಬುರಗಿ ಪ್ರಯೋಗಾಲಯಕ್ಕೆ ಜಿಲ್ಲೆಯಿಂದ ಒಟ್ಟು 939 ಶಂಕಿತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 371 ವರದಿ ನೆಗೆಟಿವ್ ಬಂದಿದೆ. ಇನ್ನೂ 554 ಜನರ ವರದಿ ಬಾಕಿ ಇದೆ. ಇದರಲ್ಲಿ ದೆಹಲಿ ಜಮಾತ್​ನಲ್ಲಿ ಭಾಗವಹಿಸಿ ಸೋಂಕು ತಗುಲಿಸಿಕೊಂಡ 10 ಜನರ ಪ್ರಾಥಮಿಕ ಸಂಪರ್ಕದಲ್ಲಿ 524 ಜನರಿದ್ದಾರೆ. 2ನೇ ಹಂತದ ಸಂಪರ್ಕದಲ್ಲಿ 1229 ಶಂಕಿತರ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details