ಬಸವಕಲ್ಯಾಣ: ನಗರ ಸೇರಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಾರಕ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇಂದು ಮತ್ತೆ 13 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕು ಪೀಡಿತರ ಸಂಖ್ಯೆ 494ಕ್ಕೆ ತಲುಪಿದೆ.
ಬಸವಕಲ್ಯಾಣದಲ್ಲಿ 13 ಮಂದಿಗೆ ಪಾಸಿಟಿವ್ - ಬಸವಕಲ್ಯಾಣ ಕೊರೊನಾ ನ್ಯೂಸ್
13 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 494ಕ್ಕೆ ಏರಿಕೆಯಾಗಿದೆ.
Basavakalyana corona case
ನಗರದ ಸರ್ವೋದಯ ಕಾಲೋನಿಯ 37 ವರ್ಷದ ವ್ಯಕ್ತಿ, ಲಾಲ್‌ತಲಾಬ್ ಬಡಾವಣೆಯ 45 ವರ್ಷದ ಮಹಿಳೆ, 27 ವರ್ಷದ ಯುವಕ, ಸರ್ಕಾರಿ ಆಸ್ಪತ್ರೆಯ 52 ವರ್ಷದ ಮಹಿಳೆ, ನಗರಸಭೆಯ 42 ವರ್ಷದ ಮಹಿಳೆ, ದೇಶಪಾಂಡೆ ಗಲ್ಲಿಯ 19 ಹಾಗೂ 17 ವರ್ಷದ ಯುವತಿಯರು, ತಾಲೂಕಿನ ಮಂಠಾಳ ಗ್ರಾಮದ 66 ವರ್ಷದ ವೃದ್ಧೆ, 28 ವರ್ಷದ ಯುವಕ, 10 ವರ್ಷದ ಬಾಲಕ, ಗೋರ್ಟಾ ಗ್ರಾಮದ 46 ವರ್ಷದ ವ್ಯಕ್ತಿ, ದೇವನಾಳ ಗ್ರಾಮದ 50 ವರ್ಷದ ವ್ಯಕ್ತಿ, 33 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.