ಬೀದರ್:ಮಹಾರಾಷ್ಟ್ರದಿಂದ ಮರಳಿದ್ದವರಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು 12 ಜನರಲ್ಲಿ ಸೋಂಕು ದೃಢವಾಗಿ ಓರ್ವ ಸಾವನಪ್ಪಿದ್ದಾನೆ.
27 ವರ್ಷದ ಪುರುಷ ಪಿ-7636 ಸಂಖ್ಯೆಯ ವ್ಯಕ್ತಿ ಕಳೆದ ಜೂನ್ 15 ರಂದು ಸಾವನ್ನಪ್ಪಿದ್ದು, ಆತನ ಗಂಟಲು ದ್ರವದ ಪರೀಕ್ಷೆ ನಡೆಸಿದಾಗ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಔರಾದ್ ತಾಲೂಕಿನ ಬಾಚೆಪಳ್ಳಿ-01, ಬೆಳಕೋಣಿ(ಚೌಧರಿ)-02, ಸಂತಪೂರ-01, ಮಸ್ಕಲ್-01, ಕಮಲನಗರ ತಾಲೂಕಿನ ಗಂಗನಬೀಡ ತಾಂಡ-02, ಬಸನಾಳ-02, ಬೀದರ್ ತಾಲೂಕಿನ ಬಗದಲ ತಾಂಡ-01 ಹಾಗೂ ಖೇಣಿ ರಂಜೋಳ ಗ್ರಾಮದಲ್ಲಿ 01 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಈ ಮೂಲಕ ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆಯಾಗಿದ್ದು, 239 ಜನರು ಗುಣಮುಖರಾಗಿದ್ದಾರೆ. ಅಲ್ಲದೆ 8 ಜನರು ಸಾವನಪ್ಪಿದ್ದು 148 ಜನರು ಕೊರೊನಾ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.