ಬೀದರ್: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಒಂದೇ ದಿನ 104 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಓರ್ವ ವ್ಯಕ್ತಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಬೀದರ್: 104 ಮಂದಿಗೆ ಸೋಂಕು ದೃಢ, ಓರ್ವ ಬಲಿ - Bidar latest news
104 ಮಂದಿಗೆ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 2,175ಕ್ಕೆ ತಲುಪಿದೆ. ಓರ್ವ ಸೋಂಕಿನಿಂದ ಮೃತಪಟ್ಟಿದ್ದು ಸಾವಿನ ಸಂಖ್ಯೆ 75 ತಲುಪಿದೆ.
Bidar corona case
ಔರಾದ್‌ನಲ್ಲಿ 8, ಬಸವಕಲ್ಯಾಣದಲ್ಲಿ 2, ಭಾಲ್ಕಿಯಲ್ಲಿ 19, ಬೀದರ್52, ಹುಮನಾಬಾದ್ 21 ಹಾಗೂ ಅನ್ಯರಾಜ್ಯಗಳ ಎರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
74 ಮಂದಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2,175 ಸೋಂಕಿತರ ಪೈಕಿ ಈವರೆಗೆ 1,483 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.