ಬಸವಕಲ್ಯಾಣ:ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಶುಕ್ರವಾರ ತಾಲೂಕಿನಲ್ಲಿ ಹೊಸದಾಗಿ 10 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಪ್ರಕರಣ ಇದೀಗ 131ಕ್ಕೆ ಏರಿಕೆಯಾಗಿದೆ.
ಬಸವಕಲ್ಯಾಣದಲ್ಲಿ ಮತ್ತೆ 10 ಜನರಲ್ಲಿ ಸೋಂಕು: 131ಕ್ಕೇರಿದ ಸೋಂಕಿತರ ಸಂಖ್ಯೆ - ಬೀದರ್ ಜಿಲ್ಲೆ ಕೊರೊನಾ ಸುದ್ದಿ
ಬಸವಕಲ್ಯಾಣದಲ್ಲಿ ಇಂದು ಹೊಸದಾಗಿ 10 ಮಂದಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ತಾಲೂಕಿನಲ್ಲಿ ಒಟ್ಟು ಪ್ರಕರಣ 131ಕ್ಕೆ ಏರಿಕೆಯಾಗಿದೆ.
![ಬಸವಕಲ್ಯಾಣದಲ್ಲಿ ಮತ್ತೆ 10 ಜನರಲ್ಲಿ ಸೋಂಕು: 131ಕ್ಕೇರಿದ ಸೋಂಕಿತರ ಸಂಖ್ಯೆ 10 New Corona positive case in basavakalyana](https://etvbharatimages.akamaized.net/etvbharat/prod-images/768-512-7592161-838-7592161-1591974487766.jpg)
ಮಧ್ಯಪ್ರದೇಶದಿಂದ ಬಂದಿರುವ ನಗರದ ವಡ್ಡರಗಲ್ಲಿಯ 55 ವರ್ಷದ ವ್ಯಕ್ತಿ ಹಾಗೂ ಮಹಾರಾಷ್ಟ್ರದಿಂದ ತವರಿಗೆ ಆಗಮಿಸಿದ ಘಾಟ್ ಹಿಪ್ಪರಗಾ ತಾಂಡಾದ 9 ಜನರಲ್ಲಿ ಸೋಂಕು ಇರುವುದು ಧೃಡಪಟ್ಟಿದೆ. ತಾಂಡಾದಲ್ಲಿ ಸೋಂಕಿಗೆ ಒಳಗಾದವರ ಪೈಕಿ ನಾಲ್ವರು ಮಹಿಳೆಯರಾಗಿದ್ದು, 5 ಜನ ಪುರುಷರಾಗಿದ್ದಾರೆ. 4 ವರ್ಷದ ಓರ್ವ ಬಾಲಕ, ಓರ್ವ ಬಾಲಕಿ ಹಾಗೂ 7 ವರ್ಷದ ಬಾಲಕನಿಗೂ ಮಹಾಮಾರಿ ವಕ್ಕರಿಸಿದೆ.
ಗುರುವಾರ 13 ಜನರಿಗೆ ವಕ್ಕರಿಸಿದ್ದ ಸೋಂಕು, ಶುಕ್ರವಾರ ಮತ್ತೆ 10 ಜನರಲ್ಲಿ ಕಾಣಿಸಿಕೊಂಡಿದೆ. ತಾಲೂಕಿನಲ್ಲಿ ಇದುವರೆಗೆ ಸೋಂಕು ಪತ್ತೆಯಾದ 131 ಜನರ ಪೈಕಿ 33ಕ್ಕೂ ಅಧಿಕ ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ನಗರದಲ್ಲಿ ಮೂರು ದಿನದಲ್ಲಿ 5 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಮನೆಗೆ ಬಂದವರಲ್ಲಿ ಸೋಂಕು ಪತ್ತೆಯಾಗಿರುವ ಕಾರಣ ಇವರ ಸಂಪರ್ಕಕ್ಕೆ ಬಂದವರೆಷ್ಟು.? ಇನ್ನೆಷ್ಟು ಜನರಿಗೆ ಸೋಂಕು ಹರಡಿದೆ ಎನ್ನುವ ಭೀತಿ ಜನರಲ್ಲಿ ಕಾಡುತ್ತಿದೆ.