ಕರ್ನಾಟಕ

karnataka

ETV Bharat / state

ಬಸವಕಲ್ಯಾಣದ ಕೋಹಿನೂರಲ್ಲಿ ಕೊರೊನಾ 'ಮಹಾ'ಸ್ಫೋಟ: ಒಂದೇ ದಿನ 10 ಕೇಸ್​​​​ ಪತ್ತೆ! - Bidar Corona cases

ಬೀದರ್​​ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಬಸವಕಲ್ಯಾಣ ತಾಲೂಕಿನ ಕೋಹಿನೂರ್​ನಲ್ಲಿ 10 ಜನರಿಗೆ ಇಂದು ಕೊರೊನಾ ಸೋಂಕಿರುವುದು ದೃಢವಾಗಿದೆ.

10 more coronavirus cases confirmed in Kohinoor at Basavakalyana taluk
ಬಸವಕಲ್ಯಾಣದ ಕೋಹಿನೂರಲ್ಲಿ ಕೊರೊನಾ ಅಟ್ಟಹಾಸ: ಒಂದೇ ದಿನ 10 ಕೇಸ್​​​ ಪತ್ತೆ

By

Published : May 26, 2020, 5:02 PM IST

ಬಸವಕಲ್ಯಾಣ(ಬೀದರ್):ತಾಲೂಕಿನಲ್ಲಿ ಮಾರಕ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಮಂಗಳವಾರ ಒಂದೇ ದಿನ 10 ಜನರಲ್ಲಿ ವೈರಸ್ ಪತ್ತೆಯಾಗುವ ಮೂಲಕ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

ತಾಲೂಕಿನ ಹೋಬಳಿ ಕೇಂದ್ರವಾಗಿರುವ ಕೋಹಿನೂರ ಗ್ರಾಮದಲ್ಲಿ ಮೂವರು ಮಹಿಳೆಯರು ಸೇರಿ ಒಟ್ಟು 10 ಜನರಲ್ಲಿ ಸೋಂಕು ದೃಢಪಟ್ಟಿದ್ದು, ತಾಲೂಕಿನಲ್ಲಿ ಇದುವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 16ಕ್ಕೆ ಏರಿದೆ.

ಬಸವಕಲ್ಯಾಣದ ಕೋಹಿನೂರಲ್ಲಿ ಕೊರೊನಾ ಅಟ್ಟಹಾಸ: ಒಂದೇ ದಿನ 10 ಕೇಸ್​​​ ಪತ್ತೆ

ಕೋಹಿನೂರಿನಲ್ಲಿ ಸೋಂಕು ದೃಢಪಟ್ಟವರ ಪೈಕಿ ಓರ್ವ ಮಹಾರಾಷ್ಟ್ರದ ರತ್ನಗಿರಿಯಿಂದ ಬಂದವರಾಗಿದ್ದರೆ, ಉಳಿದ 9 ಜನ ಮುಂಬೈನಿಂದ ಆಗಮಿಸಿದವರಾಗಿದ್ದಾರೆ. ಇವರೆಲ್ಲರನ್ನು ಬೀದರ್​​ನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹಾರಾಷ್ಟ್ರದಿಂದ ಆಗಮಿಸಿದ ಒಟ್ಟು 10 ಜನರಿಗೆ ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದರಲ್ಲಿ 70 ಜನರ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಉಳಿದ 40 ಜನರ ಗಂಟಲು ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನಿಸುವ ಕೆಲಸ ಆರೋಗ್ಯ ಇಲಾಖೆಯಿಂದ ನಡೆಯುತ್ತಿದೆ.

ತಾಲೂಕಿನ ಕೋಹಿನೂರ 10, ಧನ್ನೂರ(ಕೆ)ವಾಡಿ 3, ಉಜಳಂಬ 1, ನಾರಾಯಣಪೂರ 1 ಹಾಗೂ ಬಸವಕಲ್ಯಾಣ ನಗರದಲ್ಲಿ ಓರ್ವನಿಗೆ ಸೇರಿ ಇದುವರೆಗೆ ಒಟ್ಟು 16 ಜನರು ಸೋಂಕಿಗೆ ಒಳಗಾಗಿದ್ದಾರೆ.

ABOUT THE AUTHOR

...view details