ಕರ್ನಾಟಕ

karnataka

ETV Bharat / state

ಬೀದರ್​​ನಲ್ಲಿ ಮುಂದುವರೆದ ಕೊರೊನಾ ಅಬ್ಬರ: ಇಂದು ಮತ್ತೆ 10 ಮಂದಿಗೆ ಸೋಂಕು - bidar bhalki taluk corona news

ಬೀದರ್​​ ಜಿಲ್ಲೆಯ ಓಲ್ಡ್ ಸಿಟಿಯ ಏಳು ಜನರಿಗೆ, ಚಿಟಗುಪ್ಪದ ಇಬ್ಬರು ಹಾಗೂ ಹಾಗೂ ಭಾಲ್ಕಿ ತಾಲೂಕಿನ ಚಳಕಾಪುರದ ಒಬ್ಬ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

10 more corona positive cases in bidar
ಬೀದರ್​​ನಲ್ಲಿ ಮುಂದುವರೆದ ಕೊರೊನಾ ಅಬ್ಬರ

By

Published : May 20, 2020, 3:04 PM IST

ಬೀದರ್:ಜಿಲ್ಲೆಯಲ್ಲಿ ಕೊವಿಡ್ -19 ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ಹತ್ತು ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ.

ಓಲ್ಡ್ ಸಿಟಿಯ ಏಳು ಜನರಿಗೆ, ಚಿಟಗುಪ್ಪದ ಇಬ್ಬರು ಹಾಗೂ ಹಾಗೂ ಭಾಲ್ಕಿ ತಾಲೂಕಿನ ಚಳಕಾಪುರದ ಒಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಓಲ್ಡ್ ಸಿಟಿಯಲ್ಲಿ ತಬ್ಲಿಘಿಗಳ ಸಂಪರ್ಕದಲ್ಲಿದ್ದ 7 ಜನರಲ್ಲಿ ಸೋಂಕು ಪತ್ತೆಯಾಗಿದೆ. ಚಿಟಗುಪ್ಪ ಪಟ್ಟಣದಲ್ಲಿ ಸೊಂಕಿನಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಚಳಕಾಪುರ ಗ್ರಾಮದ ಚಿನ್ನದ ವ್ಯಾಪಾರಿಗೆ ಸೋಂಕು ತಗುಲಿದೆ.

ಈ ಮೂಲಕ ಜಿಲ್ಲೆಯಲ್ಲಿ 67 ಜನ ಸೋಂಕಿತರಾಗಿದ್ದಾರೆ. ಈ ಪೈಕಿ 21 ಜನ ಗುಣಮುಖರಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದಾರೆ.

ABOUT THE AUTHOR

...view details