ಕರ್ನಾಟಕ

karnataka

ETV Bharat / state

78 ದಿನಗಳಿಂದ ಕೋತಿಗಳಿಗೆ ಹಣ್ಣು: ದನಕರುಗಳಿಗೆ ಮೇವು ವಿತರಿಸುತ್ತಿರುವ ಯುವ ಬ್ರಿಗೇಡ್ - ಬಳ್ಳಾರಿ ಹಂಪಿ

ಕಳೆದ 78 ದಿನಗಳಿಂದ ಯುವ ಬ್ರಿಗೇಡ್ ತಂಡದವರು ಐತಿಹಾಸಿಕ ಹಂಪಿ ಪ್ರದೇಶದಲ್ಲಿ‌ ಇರುವ ಕೋತಿಗಳಿಗೆ ಹಣ್ಣು ಹಂಪಲ, ದನ ಕರುಗಳಿಗೆ ಮೇವು ವಿತರಣೆ ಮಾಡುತ್ತಿದ್ದಾರೆ.

food

By

Published : Jun 12, 2020, 11:20 AM IST

ಬಳ್ಳಾರಿ:ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ‌ ಮಂಟಪದಲ್ಲಿ ಹಸಿವಿನಿಂದ ಬಳಲುತ್ತಿರುವ ನಿರಾಶ್ರಿತರಿಗೆ ಹಾಗೂ ದೇವಸ್ಥಾನದ ಆವರಣದಲ್ಲಿ ವಾಸವಿರುವ ನೂರಾರು ಕೋತಿಗಳಿಗೆ ಕಳೆದ 78 ದಿನಗಳಿಂದ ಯುವ ಬ್ರಿಗೇಡ್ ತಂಡದವರು ಆಹಾರ ಪೂರೈಕೆ ಮಾಡಿ ಮಾನವೀಯತೆ ಮೆರದಿದ್ದಾರೆ.

ಆಹಾರ ವಿತರಿಸುತ್ತಿರುವ ಯುವ ಬ್ರಿಗೇಡ್ ತಂಡ

ಕೊರೊನಾ ವೈರಸ್​ನಿಂದಾಗಿ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಬಹಳಷ್ಟು ಕಡಿಮೆಯಾಗಿದೆ. ಇದರಿಂದ ಇಲ್ಲಿ ವಾಸವಿರುವ ಕೋತಿಗಳಿಗೆ ಆಹಾರದ ಅವಶ್ಯಕತೆ ಇದೆ. ಆದ್ದರಿಂದ ದಾನಿಗಳ ಸಹಾಯದಿಂದ ಆಹಾರ, ಹಣ್ಣುಗಳು, ಮೇವುಗಳನ್ನು ಪ್ರಾಣಿಗಳಿಗೆ ನೀಡುವ ಕೆಲಸವನ್ನು ಯುವ ಬ್ರಿಗೇಡ್ ತಂಡದ ಸದಸ್ಯರು ಮಾಡುತ್ತಿದ್ದೇವೆ ಎಂದು ಬ್ರಿಗೇಡ್ ನ ಮುಖ್ಯಸ್ಥ ರಾಚಯ್ಯ ಎಸ್. ಸ್ಥಾವರಿಮಠ ತಿಳಿಸಿದರು.

ಬ್ರಿಗೇಡ್​ನ ಮುಖ್ಯಸ್ಥ ರಾಚಯ್ಯ ಎಸ್. ಸ್ಥಾವರಿಮಠ, ವಿಶ್ವನಾಥ, ಸಂಗಮೇಶ್, ತೇಜು, ವಿರೂಪಾಕ್ಷಿ ಮತ್ತು ಕಮಲಾಪುರದ ಯುವಕರು ಭಾಗವಹಿಸಿ ನಿತ್ಯ ಪ್ರಾಣಿಗಳಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ.

ABOUT THE AUTHOR

...view details