ಕರ್ನಾಟಕ

karnataka

ETV Bharat / state

ಗ್ರಂಥಾಲಯ ದಿನಾಚರಣೆ ; ಡಾ. ಬಿ ಆರ್‌ ಅಂಬೇಡ್ಕರ್ ಮಹಾನಾಯಕ ಪುಸ್ತಕ ವಿತರಿಸಿದ ಯುವಕರು - ಹೊಸಪೇಟೆ ಸುದ್ದಿ

ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ. ಈ ಸದುದ್ದೇಶದಿಂದ ಉಚಿತವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಗಳನ್ನು ವಿತರಣೆ ಮಾಡಲಾಗುತ್ತಿದೆ. ಡಾ.ಅಂಬೇಡ್ಕರ್ ಅವರು ಭಾರತದ ರತ್ನವಿದ್ದಂತೆ..

Hospet
Hospet

By

Published : Sep 8, 2020, 7:14 PM IST

ಹೊಸಪೇಟೆ(ಬಳ್ಳಾರಿ) :ಗ್ರಂಥಾಲಯ ದಿನಾಚರಣೆ ಅಂಗವಾಗಿ ಇಂದು ಹೊಸಪೇಟೆ ಯುವಕರು ಸರ್ಕಾರಿ ಶಾಲೆಗೆ ಭೇಟಿ ನೀಡಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಮಹಾನಾಯಕ ಪುಸ್ತಕಗಳನ್ನು ವಿತರಿಸಿದರು.

ಡಾ. ಬಿ ಆರ್‌ ಅಂಬೇಡ್ಕರ್ ಮಹಾನಾಯಕ ಪುಸ್ತಕ ವಿತರಿಸಿದ ಯುವಕರು

ಇದೇ ಸಂದರ್ಭದಲ್ಲಿ ಯುವಕ ಗಿರೀಶ್ ಭದ್ರಶೆಟ್ಟಿ ಅವರು ಮಾತನಾಡಿ, ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ. ಈ ಸದುದ್ದೇಶದಿಂದ ಉಚಿತವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಗಳನ್ನು ವಿತರಣೆ ಮಾಡಲಾಗುತ್ತಿದೆ. ಡಾ.ಅಂಬೇಡ್ಕರ್ ಅವರು ಭಾರತದ ರತ್ನವಿದ್ದಂತೆ. ಅವರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಸಂವಿಧಾನ ನಾಂದಿಯಾಯಿತು ಎಂದು ಹೇಳಿದರು.

ಇದಕ್ಕೂ ಮುನ್ನ ಬಿಜೆಪಿ ಮಹಿಳಾ ಮೋರ್ಚದ ಜಿಲ್ಲಾ ಘಟಕದ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್ ಅವರು ಪುಸ್ತಕ ವಿತರಣೆಗೆ ಚಾಲನೆ ನೀಡಿದರು. ಯುವಕರಾದ ರಾಘವೇಂದ್ರ, ಯಮನೂರ, ಜಯಶ್ರೀ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details