ಹೊಸಪೇಟೆ : ನಗರದ ಹೆಚ್ಎಲ್ಸಿ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕರ ಮೃತದೇಹ ಸಂಡೂರು ತಾಲೂಕಿನ ಕುರೇಕುಪ್ಪದ ಬಳಿ ಪತ್ತೆಯಾಗಿದೆ.
ಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಯುವಕರ ಮೃತದೇಹಗಳು ಪತ್ತೆ - ಹೊಸಪೇಟೆಯಲ್ಲಿ ಕಾಲುವೆಯಲ್ಲಿ ಕೊಚ್ಚಿ ಹೋದ ಯುವಕರು
ಅ. 2ರಂದು ಸಂಜೆ ಹೊಸಪೇಟೆಯಿಂದ ಸಂಡೂರಿಗೆ ಹಿಂತಿರುವಾಗ ಕಾಲುವೆಯಲ್ಲಿ ಬಾಟಲಿಗೆ ನೀರು ತುಂಬಿಕೊಳ್ಳಲು ಹೋದ ಕಿರಣ್ ಕಾಲು ಜಾರಿ ನೀರಿಗೆ ಬಿದ್ದಿದ್ದ..

ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದವರ ಮೃತದೇಹ ಪತ್ತೆ
ಸಂಡೂರಿನ ಕಿರಣ್ (23) ಮತ್ತು ಅಬ್ದುಲ್ಲ (23) ಮೃತ ದುರ್ದೈವಿಗಳು. ಅ. 2ರಂದು ಸಂಜೆ ಹೊಸಪೇಟೆಯಿಂದ ಸಂಡೂರಿಗೆ ಹಿಂತಿರುವಾಗ ಕಾಲುವೆಯಲ್ಲಿ ಬಾಟಲಿಗೆ ನೀರು ತುಂಬಿಕೊಳ್ಳಲು ಹೋದ ಕಿರಣ್ ಕಾಲು ಜಾರಿ ನೀರಿಗೆ ಬಿದ್ದಿದ್ದ. ಆತನ ರಕ್ಷಿಣೆಗೆ ಮುಂದಾದ ಅಬ್ದುಲ್ಲ ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ. ಇಂದು ಇಬ್ಬರ ಮೃತದೇಹ ಪತ್ತೆಯಾಗಿವೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.