ಕರ್ನಾಟಕ

karnataka

ETV Bharat / state

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕ ಸಾವು - Youth dies by falling into railway track

ರೈಲು ಬರುತ್ತಿರುವಾಗ ಯುವಕನೋರ್ವ ಹಳಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

ರೈಲ್ವೆ ಹಳಿಗೆ ಬಿದ್ದು ಯುವಕ ಸಾವು
ರೈಲ್ವೆ ಹಳಿಗೆ ಬಿದ್ದು ಯುವಕ ಸಾವು

By

Published : Dec 17, 2020, 3:33 PM IST

ಬಳ್ಳಾರಿ: ಸುಮಾರು 30ರಿಂದ 35 ವರ್ಷದ ಯುವಕ ಚಲಿಸುವ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಈ ಬಗ್ಗೆ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆ ಯುಡಿಆರ್​ ನಂ. 32/2020 ಕಾಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಶವ ಪಂಚನಾಮೆ ಸಮಯದಲ್ಲಿ ಮೃತನ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ.

ಓದಿ:ಐವರನ್ನು ತಿಂದು ತೇಗಿದ್ದ ನರ ಭಕ್ಷಕ ಚಿರತೆ ಪತ್ತೆ: ನಿಟ್ಟುಸಿರು ಬಿಟ್ಟ ಸ್ಥಳೀಯರು

ಮೃತ ವ್ಯಕ್ತಿ 5.1 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈ ಬಣ್ಣ, ಕೋಲು ಮುಖ, ಗಿಡ್ಡ ಮೂಗು ಹೊಂದಿದ್ದು, ಮೃತನ ಎಡ ತೋಳಿನ ಮೇಲೆ ಹಾಗೂ ಎದೆಯ ಮೇಲೆ "ವೀಣಾ" ಎಂದು ಕನ್ನಡದಲ್ಲಿ ಹಚ್ಛೆ ಗುರುತು ಇರುತ್ತದೆ. ಈತನ ಬಗ್ಗೆ ಯಾರಿಗಾದರು ಮಾಹಿತಿ ಇದ್ದರೆ 9480802131 ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ. ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details