ಕರ್ನಾಟಕ

karnataka

ETV Bharat / state

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಕೊಲೆ... ಬೆಚ್ಚಿಬಿದ್ದ ಬಳ್ಳಾರಿ - ಯುವಕನ ಕೊಲೆ

ಕ್ಷುಲ್ಲಕ ಕಾರಣಕ್ಕೆ ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ನಗರದ 1ನೇ ವಾರ್ಡ್​ನ ಹರಿಶ್ಚಂದ್ರ ನಗರದಲ್ಲಿ ನಡೆದಿದೆ.

murder
ಕೊಲೆ

By

Published : May 14, 2020, 10:46 AM IST

ಬಳ್ಳಾರಿ:ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬುಧವಾರ ನಗರದಲ್ಲಿ ನಡೆದಿದೆ.

ನಗರದ 1ನೇ ವಾರ್ಡ್​ನ ಹರಿಶ್ಚಂದ್ರ ನಗರದ ನಿವಾಸಿ ಮಣಿ ಅಲಿಯಾಸ್ ನಾಗರಾಜ್ (30) ಕೊಲೆಯಾದ ವ್ಯಕ್ತಿ. ಕ್ಷುಲ್ಲಕ ಕಾರಣಕ್ಕೆ ಮಣಿ ಅಲಿಯಾಸ್ ನಾಗರಾಜ್ ಅವರನ್ನು ತನ್ನ ಪಕ್ಕದ ಮನೆಯ ಸ್ನೇಹಿತರೆ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ವಿವರ: ಕೆಲ ತಿಂಗಳ ಹಿಂದೆ ಪಕ್ಕದ ಮನೆಯ ಕೃಷ್ಣ, ಮಲ್ಲಿಕಾರ್ಜುನ, ಗಣೇಶ್ ಅವರು ಮಣಿಯೊಂದಿಗೆ ಹುಡುಗಿಯ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಇದನ್ನೇ ಸೇಡು ಇಟ್ಟುಕೊಂಡು ಮೂವರು ಸ್ನೇಹಿತರು ಸೇರಿಕೊಂಡು ಮಣಿಗೆ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ.‌

ತಲೆಗೆ ತೀವ್ರ ಪೆಟ್ಟಾದ ಕಾರಣ ಮಣಿ ಸಾವನ್ನಪಿದ್ದಾನೆ ಎಂದು ಗ್ರಾಮೀಣ ಠಾಣೆಯ ಡಿವೈಎಸ್​ಪಿ ಅರುಣ್ ಕೊಳೂರು ತಿಳಿಸಿದ್ದಾರೆ. ಈ ಬಗ್ಗೆ ಬಳ್ಳಾರಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.

ABOUT THE AUTHOR

...view details