ಕರ್ನಾಟಕ

karnataka

ETV Bharat / state

ಮ್ಯಾಟ್ರಿಮೊನಿಯಲ್ಲಿ ಪರಿಚಯವಾದ ಯುವತಿಯಿಂದ ಮೋಸ ಹೋದ ಶಿಕ್ಷಕ - Matrimony

ಯುವತಿಯೊಬ್ಬಳು ಶಿಕ್ಷಕನ ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

school teacher was cheated to get married
ಮದುವೆಯಾಗುವುದಾಗಿ ಖಾಸಗಿ ಶಾಲೆ ಶಿಕ್ಷಕನಿಗೆ ವಂಚಿನೆ

By

Published : Dec 14, 2022, 8:05 PM IST

ಬಳ್ಳಾರಿ:ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ ಕೇರಳ ಮೂಲದವಳು ಎನ್ನಲಾದ ಯುವತಿ ಶಿಕ್ಷಕನ ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವ ಘಟನೆ ನಡೆದಿದೆ. ಸಂಡೂರು ತಾಲೂಕಿನ ಖಾಸಗಿ ಶಾಲೆಯ ಶಿಕ್ಷಕ ದೇವೇಂದ್ರಪ್ಪ ಮೋಸ ಹೋಗಿದ್ದಾರೆ. ಹಲವು ದಿನಗಳಿಂದ ನಿರಂತರವಾಗಿ ವಾಟ್ಸಾಪ್ ಚಾಟ್, ಫೋನ್ ಕಾಲ್ ಮಾಡಿ ಹರ್ಷಿತಾ ಎಂಬಾಕೆಯ ಹೆಸರಿನಲ್ಲಿ 8.5 ಲಕ್ಷ ರೂ ದೋಚಿದ್ದಾರೆ.

ಎಂಬಿಬಿಎಸ್ ವಿದ್ಯಾರ್ಥಿನಿಯೆಂದು ಹೇಳಿದ ಯುವತಿಯ ಮಾತು ನಂಬಿ ಶಿಕ್ಷಕ ಹೈದರಾಬಾದ್‌ವರೆಗೂ ಹೋಗಿ ಬಂದಿದ್ದಾರೆ. ಈಗ ಹಣದ ಜೊತೆಗೆ ತನ್ನ ಕೆಲಸವನ್ನೂ ಕಳೆದುಕೊಂಡಿರುವ ಶಿಕ್ಷಕ ಕಂಗಾಲಾಗಿ ಅನ್ಯಮಾರ್ಗ ಕಾಣದೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಳ್ಳಾರಿಯ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಮದುವೆಯಾಗುವುದಾಗಿ ನಂಬಿಸಿ ವಂಚನೆ: ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ABOUT THE AUTHOR

...view details