ಕರ್ನಾಟಕ

karnataka

ETV Bharat / state

ಬಳ್ಳಾರಿ: ಮೋಕ ಜಾತ್ರೆಗೆ ಹೋದ ಯುವತಿ ಕಾಣೆ - ಬಳ್ಳಾರಿ ಮೋಕ ಜಾತ್ರೆ

ಫೆ.17 ರಂದು ಮೋಕ ಜಾತ್ರೆಯಲ್ಲಿ ಯುವತಿಯೋರ್ವಳು ಕಾಣೆಯಾಗಿರುವ ಕುರಿತು ದೂರು ದಾಖಲಾಗಿದೆ ಎಂದು ಮೋಕ ಪೊಲೀಸ್ ಠಾಣಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.

ಮೋಕ ಜಾತ್ರೆಗೆ ಹೋದ ಯುವತಿ ಕಾಣೆ
Young girl missing in Moka fair

By

Published : Feb 19, 2020, 7:57 AM IST

ಬಳ್ಳಾರಿ:ಫೆ.17 ರಂದು ನಡೆದ ಮೋಕ ಜಾತ್ರೆಯಲ್ಲಿ ಯುವತಿಯೋರ್ವಳು ಕಾಣೆಯಾಗಿರುವ ಕುರಿತು ದೂರು ದಾಖಲಾಗಿದೆ ಎಂದು ಮೋಕ ಪೊಲೀಸ್ ಠಾಣಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.

ರಾಯದುರ್ಗ ತಾಲೂಕಿನ ಅನಕನಾಳ್ ಗ್ರಾಮದ ಝಾನ್ಸಿ(22) ಎಂಬ ಯುವತಿ ಫೆ.17 ರಂದು ಮೋಕ ಜಾತ್ರೆಯಲ್ಲಿ ಕಾಣೆಯಾಗಿದ್ದು, ಈ ಕುರಿತು ದೂರು ದಾಖಲಾಗಿದೆ ಎಂದು ಮೋಕ ಪೊಲೀಸ್ ಠಾಣಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.

ಯುವತಿಯ ಚಹರೆ ಗುರುತು :

5.2 ಅಡಿ ಎತ್ತರ, ದುಂಡು ಮುಖ, ಬೀಳಿ ಮೈ ಬಣ್ಣ, ಹಣೆಯ ಮೇಲೆ ಮಚ್ಚೆಯ ಗುರುತು ಮತ್ತು ಎಡಮೂಗಿನ ಹತ್ತಿರ ಎರಡು ಸಣ್ಣ ಕಪ್ಪು ಮಚ್ಚೆ ಇರುತ್ತದೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾಳೆ.

ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.ಸಂ. 08392-258100, 9480803021, 9480803031, 9480803050, 0892293228 ಗೆ ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details