ಕರ್ನಾಟಕ

karnataka

ETV Bharat / state

ಹೊಸಪೇಟೆಯಲ್ಲಿ ಯೋಗ ಗುರು ಬಾಬಾ ರಾಮದೇವರಿಂದ ಯೋಗ-ಧ್ಯಾನ ಶಿಬಿರ - hospet yoga guru Ramdeva Baba

ಯೋಗ ಮತ್ತು ಧ್ಯಾನ ಶಿಬಿರದಲ್ಲಿ ಯೋಗ ಗುರು ಬಾಬಾ ರಾಮದೇವ ಅವರು ಭಾಗಿ. ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ.

Yoga camp
ಯೋಗ ಶಿಬಿರ

By

Published : Feb 5, 2020, 12:32 PM IST

Updated : Feb 5, 2020, 1:30 PM IST

ಹೊಸಪೇಟೆ:ತಾಲೂಕಿನಲ್ಲಿ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಯೋಗ ಗುರು ಬಾಬಾ ರಾಮದೇವ ಅವರು ಭಾಗವಹಿಸಿ, ಶಿಬಿರಾರ್ಥಿಗಳಿಗೆ ಯೋಗಾಸನ ಕಲಿಸಿಕೊಟ್ಟರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ ಯೋಗ ಮತ್ತು ಧ್ಯಾನವನ್ನು ಎಂ.ಎಸ್.ಪಿ.ಎಲ್. ಸಂಸ್ಥೆ ಹಾಗೂ ಪತಂಜಲಿ ಯೋಗ ಪೀಠವು ಜಂಟಿಯಾಗಿ ಬೃಹತ್ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರವನ್ನು ಆಯೋಜನೆ ಮಾಡಿತ್ತು. ಕಾರ್ಯಕ್ರಮವನ್ನು ನರೇಂದ್ರ ಕುಮಾರ ಬಲ್ಡೋಟ್ ಹಾಗೂ ಯಲ್ಲಾಲಿಂಗ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿದರು. ಯೋಗ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂದು ತಿಳಿಸಿದರು.

ಯೋಗ ಗುರು ರಾಮದೇವ ಬಾಬರಿಂದ ಯೋಗ ಮತ್ತು ಧ್ಯಾನ ಶಿಬಿರ

ಯೋಗ ಗುರು ಬಾಬಾ ರಾಮದೇವ ಅವರನ್ನು ಯಾವ ಸಂತರಿಗೂ ಹೋಲಿಕೆ ಮಾಡಲಾಗುವುದಿಲ್ಲ. ಅವರು ಯೋಗದಲ್ಲಿ ಪಾಂಡಿತ್ಯ ಪಡೆದುಕೊಂಡಿದ್ದಾರೆ. ಅವರ ಸಾರಥ್ಯದಲ್ಲಿ ನಗರದ ಎಲ್ಲ ಜನರು ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

Last Updated : Feb 5, 2020, 1:30 PM IST

ABOUT THE AUTHOR

...view details