ಕರ್ನಾಟಕ

karnataka

ETV Bharat / state

ಯಡಿಹಳ್ಳಿ ಬಾಲಕಿ ಸಾವು ಪ್ರಕರಣ: ಪೋಷಕರ ವಿರುದ್ಧ ಎಫ್​ಐಆರ್ ದಾಖಲು! - ಯಡಿಹಳ್ಳಿ ಬಾಲಕಿ ಪೋಷಕರ ಮೇಲೆ ಎಫ್​ಐಆರ್​ ದಾಖಲು,

ಯಡಿಹಳ್ಳಿ ಬಾಲಕಿ ಸಾವಿನ ಬಗ್ಗೆ ಅನುಮಾನ ಮೂಡಿರುವುದರಿಂದ ಆಕೆಯ ಪೋಷಕರ ವಿರುದ್ಧ ಎಫ್​ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Yadihalli girl death, Yadihalli girl death issue, Yadihalli girl death Case filed on parents, Vijayanagar crime news, ಯಡಿಹಳ್ಳಿ ಬಾಲಕಿ ಸಾವು, ಯಡಿಹಳ್ಳಿ ಬಾಲಕಿ ಸಾವು ವಿಷಯ, ಯಡಿಹಳ್ಳಿ ಬಾಲಕಿ ಪೋಷಕರ ಮೇಲೆ ಎಫ್​ಐಆರ್​ ದಾಖಲು, ವಿಜಯನಗರ ಅಪರಾಧ ಸುದ್ದಿ,
ಹುಡುಗಿ ಪೋಷಕರ ವಿರುದ್ಧ ಎಫ್​ಐಆರ್ ದಾಖಲು

By

Published : May 13, 2021, 10:24 AM IST

ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯಡಿಹಳ್ಳಿ ಗ್ರಾಮದ ಬಾಲಕಿಯನ್ನ ಕೊಲೆಗೈದಿರುವ ಆರೋಪದ ಅಡಿಯಲ್ಲಿ ಪೋಷಕರು, ಸಂಬಂಧಿಕರ ವಿರುದ್ಧ ಎಫ್​​ಐಆರ್ ದಾಖಲಾಗಿದೆ.

ಮೃತ ಬಾಲಕಿ ಪೋಷಕರಾದ ಭೀಮಪ್ಪ ತಂದೆ ಹನುಮಪ್ಪ, ಹನುಮಂತ ತಂದೆ ಹನುಮಪ್ಪ, ಅಂಜಿನಪ್ಪ ತಂದೆ ಸಿದ್ದಪ್ಪ, ನಾಗರಾಜ ತಂದೆ ಸಿದ್ದಪ್ಪ, ಸುರೇಶ ತಂದೆ ಸಿದ್ದಪ್ಪ, ಅಂಜಿನಮ್ಮ ಗಂಡ ಸುರೇಶ, ಕೆ.ಬಿ.ದುರುಗಪ್ಪ ತಂದೆ ಭೀಮಪ್ಪ ಹಾಗೂ ಇತರರ ವಿರುದ್ಧ ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಅನ್ಯ ಜಾತಿಯ ಯುವಕನೊಂದಿಗೆ ಓಡಿ ಹೋಗಿದ್ದಾಳೆ ಎಂಬ ಕಾರಣಕ್ಕಾಗಿ ಬಾಲಕಿ‌ ಕುಟುಂಬಸ್ಥರು ಆಕೆಗೆ ಮಾನಸಿಕವಾಗಿ ಹಿಂಸೆ ನೀಡಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಬಾಲಕಿ ಕ್ರಿಮಿನಾಶಕ ಸೇವಿಸಿದ್ದಳು. ಅಸ್ವಸ್ಥಗೊಂಡ ಬಾಲಕಿಯನ್ನ ಬೈಕ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾಳೆ.

ಆಕೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆ (ಪಿಎಂ) ಮಾಡಿಸದೆ ದಹನ ಮಾಡಿದ್ದರು. ಅದನ್ನ ಮರ್ಯಾದಾ ಹತ್ಯೆ ಎಂದೂ ಶಂಕಿಸಲಾಗಿತ್ತು. ಈ ಘಟನೆ ನಡೆದು ಮೂರು ದಿನಗಳ ಬಳಿಕ ಪೊಲೀಸರು ಎಚ್ಚೆತ್ತುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಘಟನೆ ಕುರಿತು ಹಲುವಾಗಲು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಓದಿ:ಮನೆ ಬಿಟ್ಟು ಲವರ್​ ಜೊತೆ ಹೋದ ಮಗಳು... ಕೊಲೆಗೈದು ಸುಟ್ಟು ಹಾಕಿದ್ರಾ ಕುಟುಂಬಸ್ಥರು!?

ABOUT THE AUTHOR

...view details