ಬಳ್ಳಾರಿ:ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಅಧ್ಯಯನ ಪೀಠದಿಂದ ಹೈ- ಕರ್ನಾಟಕ ಪ್ರದೇಶದಲ್ಲಿ ಸಾಮಾಜಿಕ ಅಭಿವೃದ್ಧಿಗೆ ಇರುವ ಸವಾಲುಗಳು ಎನ್ನುವ ವಿಷಯ ಕುರಿತ ಕಾರ್ಯಾಗಾರದಲ್ಲಿ ನಮ್ಮ ಹಣೆಬರಹ ಬರೆಯುವುದು ದೇವರಲ್ಲ, ಪ್ರಭುತ್ವದಿಂದ ಹಣೆಬರಹ ನಿರ್ಧಾರವಾಗುತ್ತೆ ಎಂದು ಕೆ. ನೀಲಾ ಹೇಳಿದರು.
ಹೈದರಾಬಾದ್ ಕರ್ನಾಟಕ ಪ್ರದೇಶದ ಮಹಿಳೆಯರ ದುಡಿಮೆ ಮತ್ತು ವಲಸೆ ಕುರಿತು ಮಾತನಾಡಿದ ನೀಲಾ, ಹಸಿವನ್ನು ಹೋಗಲಾಡಿಸುವ ಅಭಿವೃದ್ಧಿ ಕುರಿತು ಚಿಂತಿಸಬೇಕು. ಅಭಿವೃದ್ಧಿ ಮಾನದಂಡಗಳನ್ನು ಕೇವಲ ಪ್ಯಾಕೇಜ್ಗಳ ಮೂಲಕ ನೋಡದೇ ಪ್ರಭುತ್ವಕ್ಕೆ ತಲೆ ಕೆಡಿಸಿಕೊಳ್ಳಬಾರದು. ಹಸಿವು ನೀಗಿಸುವ ಕೆಲಸ ಮಾಡಬೇಕು ಎಂದರು. ಮಹಾತ್ಮಗಾಂಧಿ ಗ್ರಾಮೀಣಾ ಉದ್ಯೋಗ ಖಾತ್ರಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ನಾನು ಅನೇಕ ಹಳ್ಳಿಗಳನ್ನು ಸುತ್ತಿದ್ದೇನೆ.