ವಿಜಯನಗರ: ಸಾಹಿತಿ ಕುಂ.ವೀರಭದ್ರಪ್ಪ ಅವರ ಮನೆಗೆ ಮತ್ತೊಂದು ಕೊಲೆ ಬೆದರಿಕೆ ಪತ್ರ ಬಂದಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರೋ ಕುಂ.ವೀರಭದ್ರಪ್ಪ ಅವರಿಗೆ ಕಳೆದ ಒಂದೂವರೆ ತಿಂಗಳೊಳಗೆ ಬಂದ ಎರಡನೇ ಪತ್ರ ಇದಾಗಿದ್ದು, 'ನೀವು ಪೇಪರ್ ಹೀರೋ ಆಗಲು ಹೊರಟಿದ್ದೀರಿ ಅಂತ' ಪತ್ರದಲ್ಲಿ ಬರೆಯಲಾಗಿದೆ.
ಮೊದಲ ಪತ್ರ ಬಂದಾಗ ವಿಜಯನಗರ ಎಸ್ಪಿ ಡಾ. ಅರುಣ್ ಕೆ. ಅವರನ್ನ ಭೇಟಿಯಾಗಿ ರಕ್ಷಣೆ ನೀಡುವಂತೆ ಕುಂ. ವೀರಭದ್ರಪ್ಪನವರು ಮನವಿ ಮಾಡಿದ್ದರು. ಈ ಹಿಂದೆ ಅಂದ್ರೆ ಮೊದಲನೇ ಪತ್ರವನ್ನು ಭದ್ರಾವತಿಯಿಂದ ಪೋಸ್ಟ್ ಮಾಡಲಾಗಿತ್ತು. ಈ ಸಲ ಚಿತ್ರದುರ್ಗದಿಂದ ಕಳುಹಿಸಲಾಗಿದೆ.
ಪತ್ರದಲ್ಲಿ 'ಸಾಹಿತಿಗಳು, ಪ್ರೊಫೆಸರ್ಗಳು, ಬುದ್ಧಿಜೀವಿಗಳು ಹಾಗೂ ನಿಮ್ಮ ದುಷ್ಟಕೂಟವು ದೇಶ ವಿರೋಧಿ, ಸಂವಿಧಾನ ವಿರೋಧಿ, ಹಿಂದೂ ಸಮಾಜ ಹೀಯಾಳಿಸುವ ಹೇಳಿಕೆಗಳನ್ನು ಕೊಡುತ್ತೀರಿ. ಒಂದು ಧರ್ಮದವರ ಪರ ಮಾತನಾಡುತ್ತೀರಿ. ನೀವೆಲ್ಲಾ ಕ್ಷಮೆ ಕೇಳಬೇಕು, ಇಲ್ಲ ಸಾಯಲು ಸಿದ್ಧರಾಗಿ. ಜೈ ಹಿಂದೂ ರಾಷ್ಟ್ರ, ಸಹಿಷ್ಣು ಹಿಂದೂ' ಎಂಬ ಉಲ್ಲೇಖಿಸಲಾಗಿದೆ.