ಹೊಸಪೇಟೆ(ವಿಜಯನಗರ): ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿದ್ದು, ಈ ಹಿಂದೆ ಹೇರಲಾಗಿದ್ದ ನಿರ್ಬಂಧವನ್ನು ಇಂದಿನಿಂದ ತೆರವುಗೊಳಿಸಿ ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.
ವಿಶ್ವವಿಖ್ಯಾತ ಹಂಪಿ ಸ್ಮಾರಕಗಳ ವೀಕ್ಷಣೆಗೆ ಮುಕ್ತ ಅವಕಾಶ - ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಮುಕ್ತ ಅವಕಾಶ
ವಿಶ್ವವಿಖ್ಯಾತ ಹಂಪಿಯ ಸ್ಮಾರಕ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಈ ಹಿಂದೆ ಇದ್ದ ನಿರ್ಬಂಧ ಆದೇಶವನ್ನು ರದ್ದುಗೊಳಿಸಿ ಮುಕ್ತ ಅವಕಾಶ ನೀಡಲಾಗಿದೆ.
![ವಿಶ್ವವಿಖ್ಯಾತ ಹಂಪಿ ಸ್ಮಾರಕಗಳ ವೀಕ್ಷಣೆಗೆ ಮುಕ್ತ ಅವಕಾಶ world-famous-hampi-monuments-free-for-visitors](https://etvbharatimages.akamaized.net/etvbharat/prod-images/768-512-13019650-thumbnail-3x2-hampi.jpeg)
ವಿಶ್ವ ವಿಖ್ಯಾತ ಹಂಪಿ
ಈ ಹಿಂದೆ ಕೊರೊನಾ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ 14.08.2021ರಿಂದ ಪ್ರತಿ ವಾರದ ಶನಿವಾರ, ಭಾನುವಾರ, ಸೋಮವಾರ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಸ್ಮಾರಕಗಳ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ವೀಕೆಂಡ್ನಲ್ಲಿ ಆಗಮಿಸುತ್ತಿದ್ದಾರೆ. ಇದನ್ನು ಗಮನಿಸಿದ ಜಿಲ್ಲಾಡಳಿತ ಹಿಂದಿನ ಅದೇಶವನ್ನು ಹಿಂಪಡೆದಿದೆ.
Last Updated : Sep 9, 2021, 10:27 PM IST