ಬಳ್ಳಾರಿ: ಲಾಕ್ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ಸಿಲುಕಿರೋ ಹೊರ ರಾಜ್ಯಗಳ ಜಾರ್ಖಂಡ್, ಯುಪಿ ಮೂಲದ ಕಾರ್ಮಿಕರು ನಮ್ಮ ರಾಜ್ಯಕ್ಕೆ ನಮ್ಮನ್ನು ಕಳುಹಿಸಿಕೊಡಿ ಎಂದು ಜಿಲ್ಲಾಧಿಕಾರಿ ಎದುರು ಅಳಲು ತೋಡಿಕೊಂಡರು.
'ನಮ್ಮನ್ನು ನಮ್ಮ ರಾಜ್ಯಕ್ಕೆ ಕಳುಹಿಸಿಕೊಡಿ': ಹೊರ ರಾಜ್ಯಗಳ ಕಾರ್ಮಿಕರ ಅಳಲು - out of the states Workers
ಹೊರ ರಾಜ್ಯಗಳ ಕಾರ್ಮಿಕರು ನಮ್ಮ ರಾಜ್ಯಕ್ಕೆ ನಮ್ಮನ್ನು ಕಳುಹಿಸಿಕೊಡಿ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಎದುರು ಮನವಿ ಮಾಡಿಕೊಂಡರು.
!['ನಮ್ಮನ್ನು ನಮ್ಮ ರಾಜ್ಯಕ್ಕೆ ಕಳುಹಿಸಿಕೊಡಿ': ಹೊರ ರಾಜ್ಯಗಳ ಕಾರ್ಮಿಕರ ಅಳಲು Workers Appeal to Bellary District Collector](https://etvbharatimages.akamaized.net/etvbharat/prod-images/768-512-7123581-108-7123581-1589013245452.jpg)
ಕಾರ್ಮಿಕರ ಅಳಲು
ನಮ್ಮನ್ನು ನಮ್ಮ ಊರಿಗಳಿಗೆ ಕಳುಹಿಸಿಕೊಡಿ ಎಂದು ಕಾರ್ಮಿಕರು ಡಿಸಿ ಮುಂದೆ ಅಳಲು ತೋಡಿಕೊಂಡರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ನಾವು ನಿಮ್ಮ ರಾಜ್ಯಕ್ಕೆ ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇವೆ, ಅನುಮತಿ ಸಿಗೋವರೆಗೂ ಕಾಯಬೇಕಿದೆ ಎಂದು ಕಾರ್ಮಿಕರನ್ನು ಮನವೊಲಿಸಿದರು.
ಇನ್ನು ಕೆಲಸವಿಲ್ಲದೆ ನಮಗೆ ಹಸಿವಿನ ಪ್ರಶ್ನೆ ಎದುರಾಗಿದೆ ಎಂದು ತಮ್ಮ ನೋವನ್ನು ಜಿಲ್ಲಾಧಿಕಾರಿ ಅವರ ಮುಂದೆ ಕಾರ್ಮಿಕರು ಹೇಳಿಕೊಂಡಿದ್ದಾರೆ.