ಬಳ್ಳಾರಿ:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿಂದು ವಿದ್ಯಾರ್ಥಿನಿಯರು ಈ ದಿನದ ಮಟ್ಟಿಗೆ ಶಿಕ್ಷಕಿಯರಾಗಿ ಕರ್ತವ್ಯ ನಿರ್ವಹಿಸೋ ಮುಖೇನ ವಿಶೇಷವಾಗಿ ಗಮನ ಸೆಳೆದರು.
ಸರ್ಕಾರಿ ಆದರ್ಶ ಮಹಾವಿದ್ಯಾಲಯದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆಯಾದ ಸೀರೆ ಮತ್ತು ರವಿಕೆ ತೊಟ್ಟು ಥೇಟ್ ಶಾಲೆಯ ನಿಜವಾದ ಶಿಕ್ಷಕಿಯರಂತೆ ಪಾಠ ಮಾಡಿದರು. ಒಂದು ದಿನದ ಮಟ್ಟಿಗೆ ಮುಖ್ಯಶಿಕ್ಷಕಿಯಾಗಿ ವಿದ್ಯಾರ್ಥಿನಿ ಅಂಜುಮನ್ ಮದಿಯಾ ಅವರು ಕಾರ್ಯನಿರ್ವಹಿಸಿದ್ದಾರೆ. ಉಳಿದೆಲ್ಲಾ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆ ಧರಿಸಿಕೊಂಡೇ ಶಾಲೆಯ ನಾನಾ ತರಗತಿ ಕೊಠಡಿಗಳಲ್ಲಿ ಪಾಠ, ಬೋಧನೆ ಆರಂಭಿಸಿದ್ರು.