ಬಳ್ಳಾರಿ: ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ವಿರೋಧಿ ಹೋರಾಟಕ್ಕೆ ಈ ದಿನ ಕನ್ನಡ ಒಕ್ಕೂಟವು ಕರೆ ನೀಡಿತ್ತು. ಆದರೆ, ಈ ಹೋರಾಟದಲ್ಲಿ ಭಾಗಿಯಾದ ಮಹಿಳೆಯರು ಹೇಳೋದೇ ಬೇರೆ.
ಪ್ರತಿಭಟನೆಗೆಂದು ಆಗಮಿಸಿದ್ದ ಮಹಿಳೆಯರೊಂದಿಗೆ ಈಟಿವಿ ಭಾರತ ಸಂದರ್ಶನ ನಡೆಸಿದ್ದು, ಆ ಮಹಿಳೆಯರು ಹೇಳೋದೇ ಬೇರೆ. ನಗರೂರು ನಾರಾಯಣರಾವ್ ಉದ್ಯಾನದಲ್ಲಿ ನೆರೆದಿದ್ದ ಟೀಚರ್ಸ್ ಕಾಲೊನಿಯ ಹಿಂಭಾಗದಲ್ಲಿ ಜನತಾ ಗ್ಯಾರೇಜ್ ಕಾಲೋನಿಯ ನಿವಾಸಿಗಳಿಗೆ ಈ ಪ್ರತಿಭಟನೆ ಸ್ವರೂಪವೇ ತಿಳಿದಿಲ್ಲ.
‘ನಮಗಿಲ್ಲಿ ಏನ್ ನಡೀತಿದೆ ಅಂತಾನೂ ಗೊತ್ತಿಲ್ಲ’...ಪ್ರತಿಭಟನೆಗೆ ಬಂದೋರು ಹೀಗ್ ಅನ್ನೋದಾ..! ನಮಗೆ ರಸ್ತೆ ಬೇಕು, ನೀರು ಬೇಕು, ಒಳಚರಂಡಿ ವ್ಯವಸ್ಥೆ ಬೇಕು, ನಾವು ಗುಡಿಸಲಲ್ಲಿ ಇದ್ದೇವೆ ನಮಗೆ ಮನೆ ಬೇಕು ಎಂಬಿತ್ಯಾದಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಈ ಎಲ್ಲ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ ಎಂದಿದ್ದಾರೆ.
ನಮಗೆ ಸ್ಲಂ ನಿವಾಸಿಗಳ ಕಾಲೊನಿಯನ್ನಾಗಿ ಮೇಲ್ದರ್ಜೆಗೆ ಏರಿಸಿಕೋಡೋದಾಗಿ ಹೇಳಿ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಇಲ್ಲಿ ಏನ್ ನಡೀತಾ ಇದೆ ಅಂತಾನೂ ಗೊತ್ತಿಲ್ಲ ಎಂದು ಮಹಿಳೆಯರು ತಿಳಿಸಿದ್ದಾರೆ.