ಬಳ್ಳಾರಿ:ಕುರಿ ಮೇಯಿಸಲು ಹೋಗಿದ್ದ ಮಹಿಳೆ ಕಾಲು ಜಾರಿ ಕೆರೆಗೆ ಬಿದ್ದು ಸಾವಿಗೀಡಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ: ಕುರಿ ಮೇಯಿಸಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದ ವೃದ್ಧೆ ಸಾವು - ಕುರಿ ಮೇಯಿಸಲು ಹೋಗಿ ವೃದ್ಧೆ ಸಾವು
ಕುರಿ ಮೇಯಿಸಲು ಹೋಗಿದ್ದ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಬಳ್ಳಾರಿ ತಾಲೂಕಿನಲ್ಲಿ ನಡೆದಿದೆ.
![ಬಳ್ಳಾರಿ: ಕುರಿ ಮೇಯಿಸಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದ ವೃದ್ಧೆ ಸಾವು women-fell-into-lake](https://etvbharatimages.akamaized.net/etvbharat/prod-images/768-512-7232257-thumbnail-3x2-surya.jpg)
ಕುರಿ ಮೇಯಿಸಲು ಹೋಗಿ ಕಾಲು ಜಾರಿ ಕೆರೆಯಲ್ಲಿ ಬಿದ್ದ ವೃದ್ಧೆ
ತಾಲೂಕಿನ ಕೃಷ್ಣಾನಗರ ಕ್ಯಾಂಪ್ ನಿವಾಸಿ ಸರಸ್ವತಿ (63) ಮೃತ ಮಹಿಳೆ. ಇವರು ಕುರಿ ಮೇಯಿಸಲು ಹೋಗಿದ್ದ ವೇಳೆ ಕೊಳಗಲ್ಲು ಸಮೀಪದ ಕೆರೆಯೊಂದರಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಸಂಜೆ ವೇಳೆಗೆ ಕುರಿಗಳು ಮನೆಗೆ ಹಿಂದಿರುಗಿದ್ದು, ಸರಸ್ವತಿಯವರು ಮನೆಗೆ ಬರಲಿಲ್ಲ. ಬಳಿಕ ಮನೆಯವರು ಹುಡುಕಿಕೊಂಡು ಹೋದ ವೇಳೆ ಮೃತದೇಹ ಪತ್ತೆಯಾಗಿದೆ ಎಂದು ಗ್ರಾಮೀಣ ಠಾಣೆಯ ಪೊಲೀಸರು ತಿಳಿಸಿದರು.