ಹೊಸಪೇಟೆ (ವಿಜಯನಗರ): ಯುವಕನೊಂದಿಗೆ ತೆಗೆಸಿಕೊಂಡಿದ್ದ ಸೆಲ್ಫಿ ವೈರಲ್ ಆಗಿದ್ದು, ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಗುರುವಾರ ನಡೆದಿದೆ.
ತಾಲೂಕಿನ ಹಿರೇಸೊಬಟಿ ಗ್ರಾಮದ ಶೀಲಾ (24) ಮೃತ ಮಹಿಳೆ. ಹಿರೇಸೊಬಟಿ ಗ್ರಾಮದ ಗೊರವಪ್ಪನವರ ನೀಲಪ್ಪ ಎನ್ನುವ ಯುವಕ ಬುಧವಾರ ಸೊನ್ನ ಗ್ರಾಮಕ್ಕೆ ತೆರಳಿ ಕೃಷಿಭೂಮಿಯಲ್ಲಿ ಮಹಿಳೆಯೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದ. ಆ ಬಳಿಕ ಮಹಿಳೆಯ ತವರು ಮನೆಯವರ ವಾಟ್ಸಾಪ್ ಸೇರಿದಂತೆ ಇತರರಿಗೆ ಫೋಟೋ ಕಳುಹಿಸಿದ್ದಾನೆ.