ಹೊಸಪೇಟೆ: ತಾಲೂಕಿನ ವೆಂಕಟಾಪುರದ ಗರ್ಭಿಣಿಯೊಬ್ಬರು ಆ್ಯಂಬುಲೆನ್ಸ್ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಇಂದು ಬೆಳಗ್ಗೆ ನಡಿದಿದೆ.
ಹೊಸಪೇಟೆ: ಆ್ಯಂಬುಲೆನ್ಸ್ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ - Hosapete
ಮಹಿಳೆಯೊರ್ವರು ಆ್ಯಂಬುಲೆನ್ಸ್ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಆ್ಯಂಬುಲೆನ್ಸ್ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ವೆಂಕಟಾಪುರದ ಚೈತ್ರ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಬಳಿಕ ಅವರನ್ನು108 ಆರೋಗ್ಯ ಕವಚ ವಾಹನದಲ್ಲಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಮಾರ್ಗ ಮಧ್ಯೆ ಹೆರಿಗೆ ನೋವು ಹೆಚ್ಚಾದಾಗ ಆ್ಯಂಬುಲೆನ್ಸ್ನಲ್ಲಿದ್ದ ಎ.ಎನ್.ಎಂ. ಅನಿಲ್ ಹೆರಿಗೆ ಮಾಡಿಸಿದ್ದಾರೆ. ಸದ್ಯ ಮಗು ಮತ್ತು ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯವಾಗಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗಲು ಜನರು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆ ವಾಹನದಲ್ಲಿ ಸುಸೂತ್ರವಾಗಿ ಹೆರಿಗೆಯಾಗಿದ್ದು, ಸಂಬಂಧಿಕರು ಭಯದಿಂದ ಮುಕ್ತರಾಗಿದ್ದಾರೆ.