ಬಳ್ಳಾರಿ: ನಾಗರ ಹಾವು ಕಡಿತಕ್ಕೆ ಕೂಲಿ ಕಾರ್ಮಿಕ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಾಗರ ಹಾವು ಕಚ್ಚಿ ಕಾರ್ಮಿಕ ಮಹಿಳೆ ಸಾವು! - The death of a working woman
ಗ್ರಾಮದ ಹೊಲವೊಂದರಲ್ಲಿ ಕೂಲಿ ಕೆಲಸಕ್ಕೆಂದು ಹೋಗಿದ್ದ ವೇಳೆ ಮಹಿಳೆಗೆ ನಾಗರ ಹಾವು ಕಚ್ಚಿದೆ.

ಕಾರ್ಮಿಕ ಮಹಿಳೆ ಸಾವು
ಸಿರುಗುಪ್ಪ ತಾಲೂಕಿನ ಶಾಲಿಗನೂರು ಗ್ರಾಮದ ಯಲ್ಲಮ್ಮ (24) ಮೃತ ಮಹಿಳೆ. ಗ್ರಾಮದ ಹೊಲವೊಂದರಲ್ಲಿ ಕೂಲಿ ಕೆಲಸಕ್ಕೆಂದು ಹೋಗಿದ್ದ ವೇಳೆ ಮಹಿಳೆಗೆ ನಾಗರ ಹಾವು ಕಚ್ಚಿದೆ. ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾಳೆಂದು ಕುಟುಂಬದವರು ತಿಳಿಸಿದ್ದಾರೆ.
ಈ ಕುರಿತು ಸಿರುಗುಪ್ಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.