ಬಳ್ಳಾರಿ: ನಗರದ ಶ್ರೀರಾಂಪುರ ಕಾಲೋನಿಯಲ್ಲಿ ಕುಡಿಯುವ ನೀರಿನ ನಲ್ಲಿಗಳಲ್ಲಿ ಪೂರೈಕೆಯಾಗಿದ್ದ ಕಲುಷಿತ ನೀರು ಸೇವನೆಯಿಂದ ವಾಂತಿ-ಬೇದಿಯಾಗಿ ಅಸ್ವಸ್ಥಗೊಂಡಿದ್ದ ಮಹಿಳೆ ಸಾವನ್ನಪ್ಪಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಶ್ರೀರಾಂಪುರ ಕಾಲೋನಿ ಸೇರಿದಂತೆ ಇತರೆಡೆ ನಲ್ಲಿಯಲ್ಲಿ ಪೂರೈಕೆಯಾಗಿದ್ದ ಕಲುಷಿತ ನೀರನ್ನ ಸೇವಿಸಿ, ಸುಮಾರು 14 ಜನರಲ್ಲಿ ವಾಂತಿ-ಬೇದಿ ಕಾಣಿಸಿಕೊಂಡಿತ್ತು. ಆ ಪೈಕಿ ಮೂವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಲ್ಲಿ ಲಕ್ಷ್ಮೀದೇವಿ (56) ಎಂಬ ಮಹಿಳೆಯು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಎಫ್ಡಿಐ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಬಂಧಿತರ ಸಂಖ್ಯೆ 14ಕ್ಕೆ ಏರಿಕೆ
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಶ್ರೀರಾಂಪುರ ಕಾಲೋನಿ ಸೇರಿದಂತೆ ನಾನಾ ಕಡೆಗಳಲ್ಲಿ ಈ ಅನಧಿಕೃತ ನಲ್ಲಿ ಸಂಪರ್ಕ ಕಲ್ಪಿಸಿರುವುದರಿಂದಲೇ ಈ ಅವಘಡ ಸಂಭವಿಸಲು ಕಾರಣ ಎಂದು ಆರೋಪಿಸಲಾಗಿದೆ. ಹೀಗಾಗಿ, ಮಹಾನಗರ ಪಾಲಿಕೆಯು ಅನಧಿಕೃತ ನಲ್ಲಿ ಗಳ ಸಂಪರ್ಕದ ಕಡಿತಗೊಳಿಸಲು ಮುಂದಾಗಿದೆ.
ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿ, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಶ್ರೀರಾಂಪುರ ಕಾಲೋನಿಗೆ ಮತ್ತು ಉಮಾಶಂಕರ್ ಕಾಲೋನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.